ಭಯರಹಿತ ಪರಿಸರವೇ ಶಿಕ್ಷಣಕ್ಕೆ ಶಕ್ತಿ : ಡಾ. ಕುಶ್ವಂತ್ ಕೊಳಿಬೈಲ್

Advt_Headding_Middle

 

ಪಾಠಪಟ್ಟಿಯ ಔಪಚಾರಿಕತೆಯೊಂದಿಗೆ ಪರಿಸರದ ಅನೌಪಚಾರಿಕತೆ ಬೆಸೆದಾಗಲೇ ಮಕ್ಕಳಿಗೆ ಭಯಮುಕ್ತ ವಾತಾವರಣ ಸಿಗುತ್ತದೆ. ಅಂತಹ ಒಂದು ಸನ್ನಿವೇಶವನ್ನು ನಾನು ಸ್ನೇಹ ಶಾಲೆಯಲ್ಲಿ ಕಾಣುತ್ತಿದ್ದೇನೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವುದೂ ಅದಕ್ಕೆ ಪೂರಕ ಕಾರಣವೆನ್ನಬಹುದು. ಇಲ್ಲಿ ಡಾ. ದಾಮ್ಲೆಯವರು ಶಿಕ್ಷಣ ತಜ್ಞನಾಗಿ ಕಂಡ ಕನಸುಗಳನ್ನು ಸಾಕಾರಗೊಳಿಸಿದ್ದಾರೆ. ಇದೊಂದು ನಮಗೆ ಮಾದರಿ. ಕನಸು ಕಾಣುವುದು ಒಂದು ಭಾಗ. ಅನೇಕರು ಕನಸು ಕಾಣುತ್ತಾರೆ. ಅದನ್ನು ಸಾಕಾರಗೊಳಿಸುವುದು ಇನ್ನೊಂದು ಭಾಗ. ದಾಮ್ಲೆಯವರ ಈ ಸಾಧನೆ ಇಲ್ಲಿ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಪ್ರತಿಫಲಿಸುತ್ತದೆ.
ಸ್ನೇಹ ಶಾಲೆಯ ಬಗ್ಗೆ ಸಾಕಷ್ಟು ಕೇಳಿದ್ದೆ. ಒಮ್ಮೆ ನೋಡಲೇ ಬೇಕು ಅಂತ ಬಂದೆ. ನನ್ನ ಊಹನೆಗಿಂತ ಹೆಚ್ಚು ಇಲ್ಲಿ ಕಾಣಿಸುತ್ತಿದೆ. ನೋಡಿ ತುಂಬಾ ಖುಷಿಯಾಯಿತು ಎಂಬುದಾಗಿ ಮಡಿಕೇರಿಯ ಮಕ್ಕಳ ತಜ್ಞ ವೈದ್ಯ ಡಾ. ಕುಶ್ವಂತ್ ಕೊಳಿಬೈಲ್ ಶಾಲಾ ಮಕ್ಕಳನ್ನುದ್ದೇಶಿಸಿ ಮಾತಾಡಿ ಸಂತೋಷ ವ್ಯಕ್ತಪಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.