ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಉತ್ಸವವು ಡಿಸೆಂಬರ್ 14, 15ರಂದು ನಡೆಯಲಿದ್ದು,ಆ ಪ್ರಯುಕ್ತ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ಇಂದು( ಡಿ.3) ಆಮಂತ್ರಣ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ಮಹಿಷ ಮರ್ದಿನಿ ಯಕ್ಷಗಾನ ಕಲಾಕೇಂದ್ರದ ಮಕ್ಕಳ ಯಕ್ಷಗಾನ ರಂಗ ಪ್ರವೇಶದ ಆಮಂತ್ರಣ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಉತ್ಸವ ಸಮಿತಿ ಪದಾಧಿಕಾರಿಗಳಾದ ಉತ್ಸವ ಸಮಿತಿ ಅಧ್ಯಕ್ಷ ಯತೀಂದ್ರನಾಥ ರೈ ಪಿ. ಡಿ., ಸೀತಾರಾಮ ಗೌಡ ನಾಗನ ಕಜೆ, ನಾರಾಯಣ ನಾಯ್ಕ ಎಂಜೀರು, ಅವಿನಾಶ್ ದೇವರ ಮಜಲು, ಗುಣವತಿ ನಾವೂರು, ರತ್ನಾನಂದ ಕೊಡೆಂಕಿರಿ, ಗಂಗಾಧರ ಪಂಡಿತ್, ಕುಂಞಣ್ಣ ಗೌಡ ಎ., ಚಂದ್ರಶೇಖರ ಕೆ ಎಸ್.., ಕೇರ್ಪಡ ಬಾಲಕೃಷ್ಣ ರೈ ಪಾರ್ಲ, ವೆಂಕಪ್ಪ ಸಾಲಿಯಾನ್ ಎಣ್ಮೂರು, ಸುಬ್ರಹ್ಮಣ್ಯ ಎಣ್ಮೂರು, ಯಕ್ಷಗಾನ ಕಲಾಕೇಂದ್ರ ಕೇರ್ಪಡ ಇದರ ಸಂಚಾಲಕ ಪ್ರದೀಪ್ ರೈ ಎಣ್ಮೂರು ಮತ್ತು ಸದಸ್ಯರು, ಪೋಷಕರು, ಭಕ್ತಾದಿಗಳು ಉಪಸ್ಥಿತರಿದ್ದರು.