ಬೆಳ್ಳಾರೆ ಗ್ರಾಮದ ನಿವಾಸಿ ಸೋಮಯ್ಯ ಆಚಾರ್ಯರವರು ಡಿ. 3 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು .
ಅವರಿಗೆ ಮನೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು ಮಂಗಳೂರಿನ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಶ್ರೀಮತಿ ದೇವಕಿ,ಪುತ್ರ ರಾದ ಜಗದೀಶ್, ಸುಬ್ರಮಣ್ಯ, ಪುತ್ರಿಯರಾದ ಶ್ರೀಮತಿ ಗೀತಾ, ಶ್ರೀಮತಿ ಉಷಾ, ಶ್ರೀಮತಿ ಚಿತ್ರಾ, ಶ್ರೀಮತಿ ಶ್ರೀದೇವಿ, ಕು. ಅಕ್ಷತಾ ಅಳಿಯಂದಿರಾದ ರಾಘವ ಆಚಾರ್ಯ, ಸುಧಾಕರ ಆಚಾರ್ಯ, ಹಳೆಗೇಟಿನಲ್ಲಿರುವ ಕಾಳಿಕಾಂಬಾ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ದಿನೇಶ್ ಆಚಾರ್ಯ, ವಿಪಿನ್ ಆಚಾರ್ಯ, ಹಾಗೂ ಮೊಮ್ಮಕ್ಕಳನ್ನು ಮತ್ತು ಬಂಧುಮಿತ್ರರನ್ನು ಆಗಲಿದ್ದಾರೆ.ಮೃತರ ಅಂತ್ಯಸಂಸ್ಕಾರವನ್ನು ಸುಳ್ಯದ ಕೊಡಿಯಾಲಬೈಲಿನ ವಿಮುಕ್ತಿ ಧಾಮದಲ್ಲಿ ನೆರವೇರಿಸಲಾಯಿತು.