ಸಹಕಾರ ಭಾರತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಹಕಾರಿ ಸಚಿವರಿಗೆ ಮನವಿ

Advt_Headding_Middle
Advt_Headding_Middle

 

ಸಹಾಕಾರ ಭಾರತಿ ಸುಳ್ಯ ತಾಲೂಕು ಈದರ ವತಿಯಿಂದ ಸಹಾಕಾರಿ ಸಚಿವರಿಗೆ ವಿವಿಧ ಬೇಡಿಕೆಗಳನ್ನಿರಿಸಿ ಡಿ. 2ರಂದು ಮನವಿ ನೀಡಲಾಯಿತು.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರರವರು ಭಾಗವಹಿಸಿದ್ದ ಸಂದರ್ಭದಲ್ಲಿ ಮನವಿಯನ್ನು ನೀಡಲಾಯಿತು.
ಸರಕಾರ ಈ ಹಿಂದೆ ಸಾಲ ಮನ್ನಾ ಮಾಡಿರುವುದರಲ್ಲಿ ಸೌಲಭ್ಯ ದೊರೆಯದೇ ಇರುವ ಅರ್ಹ ರೈತರಿಗೆ ಶೀಘ್ರವಾಗಿ ಒದಗಿಸಬೇಕು, ಕೃಷಿ, ಅಡಮಾನ ಸಾಲಗಳ ವ್ಯವಸ್ಥೆಯನ್ನು ಸಹಕಾರ ಸಂಘಗಳೇ ಆನ್ ಲೈನ್ ಮೂಲಕ ಮಾಡಿಸಲು ಅನುವು ಮಾಡಿಕೊಡಬೇಕು ಮತ್ತು ಈ ಹಿಂದೆ ರೈತರಿಗಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿ ತಬೇಕು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಸಹಕಾರ ಭಾರತಿ ಸುಳ್ಯ ಘಟಕದ
ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಕಾರ್ಯದರ್ಶಿ ಭಾಸ್ಕರ ರಾವ್ ಉಬರಡ್ಕ, ಸದಸ್ಯರಾದ ಕರುಣಾಕರ ಶೆಟ್ಟಿ ನಾಲ್ಗುತ್ತು, ಚಿತ್ರ ದೇರಾಜೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ, ಖಜಾಂಚಿ ರಾಮಕೃಷ್ಣ ರೈ ಪೇರಾಲ್ ಗುತ್ತು ಜೊತೆಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.