ದ.12 : ಪಂಜದ ಪಲ್ಲೋಡಿಯಲ್ಲಿ ಕೆಸರ್‌ದ ಪರ್ಬ 2021

Advt_Headding_Middle
Advt_Headding_Middle

 

ಪಂಜದ ಪಲ್ಲೋಡಿ ಉಳ್ಳಾಕುಲು ಕಲಾರಂಗ ಇದರ ಆಶ್ರಯದಲ್ಲಿ ಪಲ್ಲೋಡಿ ಕೆಸರ್‌ದ ಪರ್ಬ 2021 (ಪಂಜ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟು) ದ. 12 ರಂದು ಪಲ್ಲೋಡಿ ಯಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಪಂಜ ವಲಯ ಅರಣ್ಯಧಿಕಾರಿ ಮಂಜುನಾಥ ಎನ್ ಉದ್ಘಾಟಿಸಲಿದ್ದಾರೆ. ಪಲ್ಲೋಡಿ ಉಳ್ಳಾಕುಲು ಕಲಾರಂಗದ
ಅಧ್ಯಕ್ಷ ಕವನ್ ಪಲ್ಲೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಸ್ಥಳ ದಾನಿ ಆಲ್ಫೋನ್ಸ್ ಕರ್ನೊಲಿಯೋ ವೇದಿಕೆಯಲ್ಲಿ ಉಪಸ್ಥಿತರಿರುವರು.
ಕೆಸರುಗದ್ದೆ ಕ್ರೀಡೆಗಳು: 1ರಿಂದ 5ನೇ ತರಗತಿಯ ಬಾಲಕ-ಬಾಲಕಿಯರಿಗೆ ಓಟ, ಬಾಟಲಿಗೆ ನೀರು ತುಂಬಿಸುವುದು. 6ರಿಂದ 8ನೇ ತರಗತಿಯ ಬಾಲಕ-ಬಾಲಕಿಯರಿಗೆ ಓಟ, ನಿಂಬೆ ಚಮಚ ಓಟ. 9ರಿಂದ ದ್ವಿತೀಯ ಪಿಯುಸಿ ಬಾಲಕ-ಬಾಲಕಿಯರಿಗೆ ಓಟ, ಹಗ್ಗ ಜಗ್ಗಾಟ, ರಿಲೆ. ೧೮ರಿಂದ 45 ವಯಸ್ಸಿನ ಪುರುಷರಿಗೆ ಓಟ, ಹಗ್ಗ ಜಗ್ಗಾಟ, ರಿಲೆ. 18 ರಿಂದ 45 ವಯಸ್ಸಿನ ಮಹಿಳೆಯರಿಗೆ ಓಟ ಹಗ್ಗಜಗ್ಗಾಟ ಬಾಲ್ ಪಾಸಿಂಗ್. 45 ವಯಸ್ಸಿನಿಂದ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಓಟ, ಹಗ್ಗಜಗ್ಗಾಟ. ದಂಪತಿಗಳಿಗೆ ಸ್ಪರ್ಧೆ: ಅಡಿಕೆ ಹಾಳೆಯಲ್ಲಿ ಎಳೆಯುವುದು ವಯಸ್ಸಿನ ಮಿತಿಯಿಲ್ಲ (ಮಹಿಳೆಯರು ಎಳೆಯುವುದು)
ಬೆನ್ನಿನಲ್ಲಿ ಎತ್ತಿಕೊಂಡು ಓಟ (ಪುರುಷರು ಎತ್ತಿಕೊಳ್ಳುವುದು) ಗುಂಪು ಆಟಗಳಿಗೆ ತಂಡಗಳನ್ನು ಸ್ಥಳದಲ್ಲಿ ಆಯೋಜಕರು ರಚಿಸುತ್ತಾರೆ. ವಯಸ್ಸಿನ ಮತ್ತು ವಿಳಾಸದ ದಾಖಲೆ ಪತ್ರಿಕೆ ತರತಕ್ಕದ್ದು.ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಉಪ ವಲಯ ಅರಣ್ಯಾಧಿಕಾರಿಗಳಾದ ರವಿಪ್ರಕಾಶ್,ಸಂತೋಷ್ ಕುಮಾರ್ ಕೆ, ಯುವಜನ ಸಂಯುಕ್ತ ಮಂಡಳಿಯ ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ ಉಪಸ್ಥಿತರಿರುವರು ಎಂದು ಕಲಾರಂಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.