ಸುಳ್ಯ ತಾಲೂಕು ವಕೀಲರ ದಿನಾಚರಣೆ ಕಾರ್ಯಕ್ರಮ

Advt_Headding_Middle
Advt_Headding_Middle

 

 

ಸುಳ್ಯ ತಾಲೂಕು ವಕೀಲರ ಸಂಘ ಇದರ ಆಶ್ರಯದಲ್ಲಿ ಡಿಸೆಂಬರ್ 3ರಂದು ವಕೀಲರ ದಿನಾಚರಣೆಯನ್ನು ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ವೆಂಕಪ್ಪ ಗೌಡ ವಹಿಸಿದ್ದರು.
ಹಿರಿಯ ನ್ಯಾಯವಾದಿ ದಳ ಸುಬ್ರಾಯ ಭಟ್ ವಕೀಲರ ದಿನಾಚರಣೆಯ ಕುರಿತು ಮಾತನಾಡಿ, ವಕೀಲರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು ಇದರ ಗೌರವವನ್ನು ನಾವು ಕಾಪಾಡಿಕೊಳ್ಳಬೇಕು. ವಕೀಲರುಗಳು ಸಮಾಜದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ಸಾಹಸದಲ್ಲಿ ಶಕ್ತಿ ಉಳ್ಳವರಾಗಿದ್ದು ಸಮಾಜಕ್ಕೆ ಮಾದರಿಯಾದ ಬದುಕನ್ನು ಎಲ್ಲಾ ವಕೀಲರು ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳಾದ ಕೆ.ಎಸ್.ನಿರ್ಮಲ, ರಂಜಿತ್ ಕುಕ್ಕೆಟ್ಟಿ, ಹರ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ತಾಲೂಕು ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಅಂಗವಾಗಿ ಸುಳ್ಯದ ಹಿರಿಯ ನ್ಯಾಯವಾದಿಗಳಾದ ಬಿ ವೆಂಕಪ್ಪ ಗೌಡ, ಹಾಗೂ ಸೂರ್ಯನಾರಾಯಣ ಭಟ್ ಕೊಡಂಕೇರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ಕೋಶಾಧಿಕಾರಿ ವಿನಯ ಮುಳುಗಾಡು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಗಾಂಭೀರ್ ವಂದಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಎಲ್ಲಾ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.