ಕೋವಿಡ್ ಮುಕ್ತ ಸುಳ್ಯ ತಾಲೂಕು

Advt_Headding_Middle
Advt_Headding_Middle

10 ದಿನದಿಂದ ಶೂನ್ಯ ಪಾಸಿಟಿವ್ : ಸಕ್ರಿಯ ಪ್ರಕರಣ ಇಲ್ಲ

ಸುಳ್ಯ ತಾಲೂಕು ಕೋವಿಡ್ ಮುಕ್ತವಾಗಿದೆ. ಕಳೆದ 10 ದಿನಗಳಿಂದ ಸುಳ್ಯ ತಾಲೂಕಿನಲ್ಲಿ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.ಮತ್ತು ಸದ್ಯ ತಾಲೂಕಿನಲ್ಲಿ ಯಾವುದೇ ಕೋವಿಡ್ ಸಕ್ರಿಯ ಪ್ರಕರಣ ಇಲ್ಲ. ಆದುದರಿಂದ ತಾಲೂಕು ಕೋವಿಡ್ ಮುಕ್ತವಾಗಿದೆ. ನ.25 ರಂದು ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅಂದು 6 ಸಕ್ರೀಯ ಪ್ರಕರಣ ಇತ್ತು. ನ.26 ರಿಂದ ಡಿ.5ರವರೆಗೆ ನಿರಂತರ 10 ದಿನ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಈ ಅವಧಿಯಲ್ಲಿ RAT ಮತ್ತು RTPCR ಟೆಸ್ಟ್ ನಲ್ಲಿ ಎಲ್ಲಾ ವರದಿಗಳು ನೆಗೆಟಿವ್ ಆಗಿರುತ್ತದೆ. ಚಿಕಿತ್ಸೆಯಲ್ಲಿದ್ದ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ತಿಳಿಸಿದ್ದಾರೆ. ಕಳೆದ 4-5 ತಿಂಗಳಿನಿಂದ ತಾಲೂಕಿನಲ್ಲಿ ಕೋವಿಡ್ ಇಳಿಮುಖವಾಗಿತ್ತು. ಕಳೆದ ಒಂದೆರಡು ತಿಂಗಳಲ್ಲಿ ಕೆಲವು ದಿನಗಳಲ್ಲಿ ಒಂದೆರಡು ಪ್ರಕರಣಗಳು ಕಂಡು ಬರುತ್ತಿತ್ತು. ತಾಲೂಕಿನಲ್ಲಿ ನಡೆಸಿದ ಲಸಿಕಾ ಅಭಿಯಾನದಿಂದ ಕೋವಿಡ್ ನಿಯಂತ್ರಣಕ್ಕೆ ಬಂದು ತಾಲೂಕು ಕೋವಿಡ್ ಮುಕ್ತವಾಗಲು ಸಾಧ್ಯವಾಗಿದೆ. ಮೊದಲ ಡೋಸ್ ಲಸಿಕೆ ಪಡೆಯದವರು ಮತ್ತು ಎರಡನೇ ಡೋಸ್ ಅವಧಿ ಆದವರು ಕೂಡಲೇ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ವಿನಂತಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.