ಡಿ.12ರಂದು ಸುಳ್ಯ ಬಿಜೆಪಿ ಕಚೇರಿಯಲ್ಲಿ ಅಸಂಘಟಿತ ವಲಯ ಕಲಾವಿದರ ನೋಂದಾಯಿಸುವ ಕಾರ್ಯಕ್ರಮ

Advt_Headding_Middle
Advt_Headding_Middle

 

ಕಾರ್ಮಿಕ ಇಲಾಖೆ ಸಹಯೋಗ

 

ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ, ಸುಳ್ಯ ಮಂಡಲ ಸಮಿತಿಯ ಆಶ್ರಯದಲ್ಲಿ, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಅಸಂಘಟಿತ ವಲಯದ ಕಲಾವಿದರನ್ನು ನೊಂದಾಯಿಸುವ ಕಾರ್ಯಕ್ರಮ ಡಿಸೆಂಬರ್ 12ರಂದು ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ ಎಂದು ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕ ರಮೇಶ್ ಬಾಳಿಲ ತಿಳಿಸಿದರು.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ನೋಂದಾಯಿತ ಕಲಾವಿದರು ಗುರುತಿನ ಚೀಟಿ ಪಡೆಯಬಹುದಾಗಿದ್ದು ಇದು ದೇಶಾದ್ಯಂತ ಹಾಗೂ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ. 16 ವರ್ಷದಿಂದ 59 ವಯೋಮಾನದವರು ನೋಂದಾವಣೆಗೆ ಅರ್ಹತೆ ಪಡೆಯುತ್ತಾರೆ. ನೊಂದಾವಣಿಗೆ ಬರುವಾಗ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಯ ಜೋಡಣೆಯ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ತರಬೇಕು.
ಯಕ್ಷಗಾನ, ನಾಟಕ, ಭರತನಾಟ್ಯ, ಕಿರುತೆರೆ, ಸಿನಿಮಾ, ಸಂಗೀತ, ಜಾನಪದ, ದೈವ ನರ್ತನ, ಸ್ಯಾಕ್ಸೋಫೋನ್, ವಾಲಗ, ಕಿನ್ನರಿ ಮೇಳ, ಗೊಂಬೆಯಾಟ, ಜಾದೂ, ಮಿಮಿಕ್ರಿ, ಬೀದಿ ನಾಟಕ, ದೊಂಬರಾಟ, ಭಜನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಂಬಂಧಪಟ್ಟ ಕಲಾವಿದರು ಮತ್ತು ಸಹಾಯಕರು ಇದರಲ್ಲಿ ಭಾಗವಹಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ಸಹಸಂಚಾಲಕ ರೋಹಿತ್ ಸುಳ್ಯ, ಜಿಲ್ಲಾ ಸದಸ್ಯ ಜಾಹ್ನವಿ ಕಂಚೋಡು, ಸದಸ್ಯರಾದ ಎ.ಟಿ ಕುಸುಮಾಧರ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.