ಗ್ರಾಮ ಪಂಚಾಯತ್ ಸಬಲೀಕರಣಕ್ಕೆ ಆದ್ಯತೆ : ಕೋಟ ವಿಶ್ವಾಸ

Advt_Headding_Middle
Advt_Headding_Middle

 

ಈ ಚುನಾವಣೆ ಸಂಘಟನೆಯ ಶಕ್ತಿ ಪ್ರದರ್ಶನ : ಸಚಿವ ಅಂಗಾರ

ವಿಧಾನ ಪರಿಷತ್ ಚುನಾವಣೆ : ಸುಳ್ಯದಲ್ಲಿ ಬಿಜೆಪಿ ಪ್ರಚಾರ ಸಭೆ

ವಿಧಾನ ಪರಿಷತ್ ನಲ್ಲಿ ಈ ಹಿಂದೆ ಮೂರು ಬಾರಿ ಆಯ್ಕೆಯಾಗಿ ಕೆಲಸ ಮಾಡಿದ ಅನುಭವ ನನಗಿದ್ದು ನಾಲ್ಕನೇ ಬಾರಿಗೆ ಪಕ್ಷ ನನಗೆ ಅವಕಾಶ ನೀಡಿದೆ. ನಾನು ಈ ಹಿಂದೆ ಆಯ್ಕೆ ಆದಲ್ಲಿಂದ ನಿರ್ವಹಿಸಿದ ಕೆಲಸದಲ್ಲಿ ತೃಪ್ತಿ ನನಗಿದ್ದು, ಮುಂದೆಯೂ ಗ್ರಾಮ ಪಂಚಾಯತ್ ಗಳ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೇರಳದಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿ ಎಲ್ಲ ಪಿಂಚಣಿಗಳು, ಜನನ – ಮರಣ ಸರ್ಟಿಫಿಕೇಟ್, ಪಡಿತರ ಎಲ್ಲವೂ ಗ್ರಾಮ ಪಂಚಾಯತ್ ಮೂಲಕ ಕೊಡುವ ವ್ಯವಸ್ಥೆ ಆಗುತ್ತಿದೆ. ಕೇರಳ ಮಾದರಿ ಅಲ್ಲದಿದ್ದರೂ ಅದೇ ಯೋಚನೆ ನಮ್ಮಲ್ಲಿಯೂ ಇದೆ ಎಂದ ಅವರು ಮಹಿಳಾ ಮೀಸಲಾತಿ ಯನ್ನು ಶೇ.50 ಸಿಗುವಂತೆ ನಮ್ಮ ಸರಕಾರ ಮಾಡಿದೆ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಈಗಾಗಲೇ ಧ್ವನಿ ಎತ್ತಲಾಗಿದೆ ಎಂದ ಅವರು ಪಂಚಾಯತ್ ರಾಜ್ ವ್ಯವಸ್ಥೆ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಮೀನುಗಾರಿಕಾ, ಬಂದರು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ನಮ್ಮ ಹಿರಿಯರು ಪಟ್ಟ ಪರಿಶ್ರಮದಿಂದಾಗಿ ಪಕ್ಷ ಅಧಿಕಾರದಲ್ಲಿದೆ. ಇಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡಿಲ್ಲ. ಆದ್ದರಿಂದ ಕಾಂಗ್ರೆಸ್ ನ್ನು ಸೋಲಿಸಿ, ಬಿಜೆಪಿ ಮೇಲೆ ವಿಶ್ವಾಸ ಇಟ್ಟು ಗ್ರಾ.ಪಂ. ನಿಂದ ಕೇಂದ್ರದ ವರೆಗೆ ಜನರು ಅಧಿಕಾರ ಕೊಟ್ಟಿದ್ದಾರೆ. 60 ವರ್ಷದಲ್ಲಿ ಕಾಂಗ್ರೆಸ್ ಮಾಡದ ಅಭಿವೃದ್ಧಿ ಯನ್ನು ಕಳೆದ 7 ವರ್ಷದಲ್ಲಿ ಬಿಜೆಪಿ ಸರಕಾರ ಮಾಡಿದೆ. ಜನರ ಸಮಸ್ಯೆ ಸ್ಪಂದಿಸಿದ ಬಗ್ಗೆ ದಾಖಲೆಗಳು ನಮ್ಮಲ್ಲಿದೆ. ಗ್ರಾಮ ಸಡಕ್ ಯೋಜನೆಯನ್ನು ತಂದ ನಮ್ಮ ಸರಕಾರ ಗ್ರಾಮೀಣ ರಸ್ತೆ ಅಭಿವೃದ್ದಿ ಮಾಡಿದೆ. ಆದರೂ ಕಾಂಗ್ರೆಸ್ ನವರು ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುವುದೂ ಇದೆ ಎಂದ ಅವರು ಸರಕಾರದ ಯೋಜನೆಯನ್ನು ಕಾಂಗ್ರೆಸ್ ‌ನವರು ಕೂಡಾ ಪಡೆದುಕೊಂಡು ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ನ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವಿನ ಸಂಶಯ ಇಲ್ಲ. ಸಂಘಟನೆಯ ಶಕ್ತಿ ಪ್ರದರ್ಶನವಷ್ಟೆ. ಆದ್ದರಿಂದ ನಮ್ಮ ಅಭ್ಯರ್ಥಿ ನಮ್ಮ ಮತಗಳ ಜತೆಗೆ ಇನ್ನಿತರ ಮತವನ್ನು ಪಡೆದು ದಾಖಲೆ ಸೃಷ್ಟಿಸಬೇಕು ಎಂದು‌ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದರು.

ಡಿ.6 ರಂದು ನಿಧನರಾದ ಮಾಜಿ ಶಾಸಕ ರಾಮಭಟ್ಟರು ನಿಧನರಾಗಿದ್ದು ಅವರಿಗೆ ಶ್ರದ್ದಾಂಜಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರವರು ನುಡಿನಮನ ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬಿಜೆಪಿ ಜಿಲ್ಲಾ ಪ್ರಭಾರಿ ಬೂಡಿಯಾರ್ ರಾಧಾಕೃಷ್ಣ ರೈ, ಸತೀಶ್ ಕುಂಪಲ, ಜಜಯಂತ್ ನಾಯಕ್ ಪುತ್ತೂರು, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಸುಧೀರ್ ಶೆಟ್ಟಿ‌ಕಣ್ಣೂರು, ಹರಿಕೃಷ್ಣ ಬಂಟ್ವಾಳ, ಸಂತೋಷ್ ಕುಮಾರ್ ಬೊಳಿಯಾರು, ಜಯಶ್ರೀ ಕರ್ಕೆರ, ಹರಿಯಪ್ಪ ಸಾಲ್ಯಾನ್, ಮಂಗಳಾಚರ್ಯ ಪ್ರಸಾದ್ ಕುಮಾರ್ ಬೆಳ್ತಂಗಡಿ, ಉಪಸ್ಥಿತರಿದ್ದರು.

ದೇವದಾಸ್ ರೈ ಬಂಟ್ವಾಳ ಮತದಾನ ಪ್ರಾತ್ಯಕ್ಷಿಕೆ ನೇತೃತ್ವ ವಹಿಸಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಂದೆ ಮಾತರಂ ಹಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.