ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ  ಪೊಲೀಸ್ ಬಂದೋಬಸ್ತ್ ನೀಡಲು ಮುಸ್ಲಿಂ ಒಕ್ಕೂಟದ ಮನವಿ

Advt_Headding_Middle

 

 ಡಿಸೆಂಬರ್ 13 ರಂದು ವಿವಿಧ ಹಿಂದೂಪರ ಸಂಘಟನೆಗಳು ಸುಳ್ಯದಲ್ಲಿ ನಡೆಸಲಿರುವ ಶೌರ್ಯ ಸಂಚಲನ ಎಂಬ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು, ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಉದ್ರೇಕಕಾರಿ ಘೋಷಣೆಗಳು, ಸಭೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಿ ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಸಂಭವಗಳು ಇರುತ್ತದೆ. ಆದ್ದರಿಂದ ಶಾಂತಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಸಮಾಜ ಬಾಂಧವರು ಅವಶ್ಯ ಮುಂಜಾಗ್ರತೆ ವಹಿಸುವಂತೆ ನಮ್ಮ ಸಂಘಟನೆಯ ವತಿಯಿಂದ ಈಗಾಗಲೇ ನಿರ್ದೇಶನ ನೀಡಿರುತ್ತೇವೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಾಲೂಕಿನಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇವೆ ಎಂಬ ಮನವಿಯನ್ನು ಸುಳ್ಯ ವೃತ್ತ ನಿರೀಕ್ಷಕರ ಮುಖೇನ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಹಾಗೂ ಸುಳ್ಯ ತಹಸಿಲ್ದಾರ್ ಮುಖೇನ ಜಿಲ್ಲಾಧಿಕಾರಿಯವರಿಗೆ ಇಂದು ನೀಡಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ, ಸಹಸಂಚಾಲಕರುಗಳಾದ ಕೆಎಸ್ ಉಮ್ಮರ್, ಆರ್ ಕೆ ಮಹಮ್ಮದ್, ಸಮಿತಿಯ ಸದಸ್ಯರುಗಳಾದ ಹಾಜಿ ಮುಸ್ತಫಾ ಜನತಾ, ಕೆ ಬಿ ಮಜೀದ್, ಅಬೂಬಕ್ಕರ್ ಅಡ್ಕರ್,ಉವೈಸ್ ಲ್ಯಾಪ್ ಶಾಪ್,
ಹಿರಿಯರಾದ ಹಾಜಿ ಇಸಾಕ್ ಸಾಹೇಬ್ ಪಾಜಾಪಳ್ಳ, ಇಬ್ರಾಹಿಂ ಕದಿಕ್ಕಡ್ಕ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.