ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ

Advt_Headding_Middle

 

ನಾಳೆ  ಚಂಪಾಷಷ್ಠಿ ಬ್ರಹ್ಮರಥೋತ್ಸವ

ಸುದ್ದಿ ಚಾನೆಲ್‌ ನಲ್ಲಿ ನೇರ ಪ್ರಸಾರ

ಇಂದು ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ ನಡೆಯಲಿದ್ದು ನಾಳೆ (ಡಿ.9) ರಂದು ಪ್ರಾತಃಕಾಲ 6.58 ರ ವೃಶ್ಚಿಕ ಲಗ್ನ ಸುಮೂಹೂರ್ತದಲ್ಲಿ ಶ್ರೀಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನೆರವೇರಲಿದೆ.

ಇಂದು ರಾತ್ರಿ ಪಂಚಮಿ ರಥವು ರಥಬೀದಿಯಲ್ಲಿ ಸಾಗಿ ಕಾಶಿಕಟ್ಟೆವರೆಗೆ ತೆರಳಿ ಬರಲಿದೆ.
ನಾಳೆ ಬೆಳಗ್ಗೆ ಬ್ರಹ್ಮರಥೋತ್ಸವ ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಲಿದೆ ಬಳಿಕ ರಾಜಬೀದಿಯಲ್ಲಿ ನಾಗಸ್ವರ, ಪಂಚ ವಾದ್ಯ, ಜಾಗಟೆ, ಶಂಖ ವಾದ್ಯ, ಚೆಂಡೆ ವಾದನದಲ್ಲಿ ಹಿಮ್ಮೇಳದಲ್ಲಿ ಆನೆ ಬಿರುದಾವಳಿ ಮೂಲಕ ಶ್ರೀ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ರಥಾರೂಢರಾಗಿ, ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ರಥಾರೂಡರಾಗಿ ಮಹಾರಥೋತ್ಸವ ನಡೆಯಲಿದೆ.

ಸುದ್ದಿ ಚಾನೆಲ್‌ ನೇರ ಪ್ರಸಾರ
ಷಷ್ಠಿ ಮಹೋತ್ಸವದ ಅಂಗವಾಗಿ ಇಂದು ನಡೆಯುವ ಪಂಚಮಿ ರಥೋತ್ಸವ ಮತ್ತು ನಾಳೆ ನಡೆಯುವ ಬ್ರಹ್ಮರಥೋತ್ಸವ ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್‌ ಪೇಜ್ ನಲ್ಲಿ ನೇರ ಪ್ರಸಾರವಾಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.