ಅರಂತೋಡು ಗ್ರಾ.ಪಂ.ನಲ್ಲಿ ಪುಸ್ತಕ ಗೂಡು ಆರಂಭ

Advt_Headding_Middle
Advt_Headding_Middle

ಅರಂತೋಡು ಗ್ರಾ.ಪಂ.ನಲ್ಲಿ ತೆರೆದ ಪುಸ್ತಕ ಗೂಡು ಶುಭಾರಂಭಗೊಂಡಿತು. ಅರಂತೋಡು ಪಾಪ್ಯುಲರ್ ಎಜುಕೇಶನ್ ಸೊಸೈಟಿಯ ಸಂಚಾಲಕ ಕೆ.ಆರ್.ಗಂಗಾಧರ್‌ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಜನರಲ್ಲಿ ಓದುವ ಹವ್ಯಾಸವನ್ನು ಜಾಗೃತ ಗೊಳಿಸುವ ವ ಸಲುವಾಗಿ ಆರಂಭಿಸಲಾದ ಈ ಕಿರು ಗ್ರಂಥಾಲಯ ಮುಂದಿನ ದಿನಗಳಲ್ಲಿ ಜನರಿಗಾಗಿ ಹಗಲು ಹೊತ್ತಿನಲ್ಲಿ ತೆರೆದಿರುತ್ತದೆ.
ಸಾರ್ವಜನಿಕರು ಬಂದು ಈ ಪುಸ್ತಕದ ಗೂಡಿನಿಂದ ಪುಸ್ತಕವನ್ನು ಪಡೆದು ಸ್ಥಳದಲ್ಲಿಯೇ ಕುಳಿತು ಓದಿ ಹೋಗಬಹುದಾದ ವ್ಯವಸ್ಥೆಯಾಗಿದೆ. ಪುಸ್ತಕವನ್ನು ತೆಗೆದುಕೊಂಡು ಪುಸ್ತಕ ಗೂಡಿನ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ. ಯಾರಾದರೂ ಪುಸ್ತಕವನ್ನು ದಾನ ಮಾಡುವುದಾದಲ್ಲಿ ಅದನ್ನು ಗ್ರಾಮ ಪಂಚಾಯಿತಿಗೆ ಅಥವಾ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ನೀಡಬೇಕು. ದಾನಿಗಳು ನೀಡುವ ಪುಸ್ತಕಗಳನ್ನು ದಾಖಲಿಸಿದ ನಂತರ ಗ್ರಾಮ ಪಂಚಾಯತ್ ಸಿಬ್ಬಂದಿಗಳೇ ಅವಶ್ಯಕವಿರುವ ಪುಸ್ತಕಗಳನ್ನು ಪುಸ್ತಕದ ಗೂಡಿನಲ್ಲಿ ಇಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಪಂಚಾಯತ್‌ನವರು ತಿಳಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.