ಶೇಣಿ ಶಾಲೆಗೆ ಕಂಪ್ಯೂಟರ್ ಕೊಡುಗೆ

Advt_Headding_Middle
Advt_Headding_Middle

 

ಶೇಣಿ ಹಿರಿಯ ಪ್ರಾಥಮಿಕ ಶಾಲೆಗೆ ಡಿ.೨೯ ರಂದು ಇನ್‌ಫೋಸಿಸ್ ಕಂಪನಿ ವತಿಯಿಂದ ನೀಡಲಾದ ಮೂರು ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ಶೇಣಿ ಶಾಲೆಯ ಹಳೆಯ ವಿದ್ಯಾರ್ಥಿ ಡಾ ಮುರಲೀ ಮೋಹನ್ ಚೂಂತಾರು ಅವರು ಈ ಕಂಪ್ಯೂಟರ್‌ಗಳನ್ನು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮಾಧವ ಪಿ.ಟಿ ಪಿಂಡಿಬನ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ಮಾಡಬಾಕಿಲು, ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಮಹೇಶ್ ಚೂಂತಾರು, ಶ್ರೀಮತಿ ಗೀತಾ ಗಣೇಶ್, ನಾಗೇಶ್ ಚೂಂತಾರು, ಸಿದ್ಧಿ ವಿನಾಯಕ ಭಟ್ ಚೂಂತಾರು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.