ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹೊಸ ವರ್ಷವನ್ನು ಅತಿ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ, ಶಿಕ್ಷಕ ಶಿಕ್ಷಕೇತರ ವರ್ಗದವರಿಗೂ, ಪೋಷಕರಿಗೂ ಶಾಲಾ ಸಂಚಾಲಕರಾದ ಡಾ. ರೇಣುಕಾಪ್ರಸಾದ್ ಕೆ. ವಿ ಇವರು ಹೊಸ ವರ್ಷದ ಶುಭಾಶಯಗಳನ್ನು ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ, ವಿದ್ಯಾರ್ಥಿ ತಂಡದ ನಾಯಕ ಮತ್ತು ನಾಯಕಿಯಾಗಿರುವ ಪ್ರಥಮ್ ಮತ್ತು ಸುದೀಪ್ತ ರವರು ಪ್ರದರ್ಶನ ಫಲಕದ ಮೂಲಕ ನೆರೆದಿರುವ ಎಲ್ಲರಿಗೂ ಶುಭಾಶಯವನ್ನು ಕೋರುತ್ತಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹತ್ತನೇ ತರಗತಿಯ ತನುಷ ಬಿ.ಎಸ್, ಸುದೀಪ್ತ ಹಾಗೂ ಎಂಟನೇಯ ತರಗತಿಯ ಅಂಶಿ ರವರು ನಿರ್ವಹಿಸಿದರು . ಈ ಸಂದರ್ಭದಲ್ಲಿ 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಂದ ಪುಟ್ಟ ಮನರಂಜನಾ ಕಾರ್ಯಕ್ರಮಗಳು ನೆರವೇರಲ್ಪಟ್ಟಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲರಾದ ಅರುಣ್ ಕುಮಾರ್ ರವರು ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಉದ್ದೇಶಿಸಿ ” ನಾವು ಈ ಹೊಸವರ್ಷದಲ್ಲಿ ನಮ್ಮ ಜೀವನದಲ್ಲಿ ಧನಾತ್ಮಕವಾಗಿ ಚಿಂತಿಸಿ, ಶಿಸ್ತುಬದ್ಧವಾದ ಜೀವನವನ್ನು ನಡೆಸಿ, ಎಲ್ಲಾ ರೀತಿಯ ಸುಖ ಸಂತೋಷಗಳನ್ನು ಪಡೆಯಬೇಕೆಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಕಾರ್ಯಕ್ರಮಕ್ಕೆ ಶಿಕ್ಷಕಿಯಾದ ಪಲ್ಲವಿ ಅವರು ಸಹಕರಿಸಿದರು. ಕಾರ್ಯಕ್ರಮದ ನಂತರ ಕಿಂಡರಗಾರ್ಡನ್ ವಿಭಾಗದ ಪುಟಾಣಿಗಳು ಸ್ವತಃ ತಾವೇ ರಚಿಸಿದ ಶುಭಾಷಯ ಪತ್ರಗಳನ್ನು ವಿನಿಮಯ ಮಾಡಿಕೊಂಡು ನೂತನ ವರ್ಷವನ್ನು ಸಂಭ್ರಮಿಸಿದರು.