Breaking News

ಎಸ್ ಎಂ ಎ ಸುಳ್ಯ ಮೆಂಬರ್ ಶಿಪ್ ವಿತರಣೆ ಹಾಗೂ ವಿವಿಧ ಯೋಜನೆಗಳ ರೂಪುರೇಷೆ

Advt_Headding_Middle

 

ಸುನ್ನೀ ಮಾನೆಜ್ ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಇದರ ಮಾಸಿಕ ಸಭೆ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್ ಜೆ ಎಂ ಸುಳ್ಯ ರೇಂಜ್ ಕೋಶಾಧಿಕಾರಿ ಇಬ್ರಾಹಿಂ ಸಖಾಫಿ ಪುಂಡೂರು ಉದ್ಘಾಟಿಸಿದರು. ಸಭೆಯಲ್ಲಿ ಈ ಮೊದಲು ನಡೆದ ಎಸ್ ಎಂ ಎ ಸದಸ್ಯತ್ವ ಅಭಿಯಾನದಲ್ಲಿ ಸದಸ್ಯತ್ವ ಪಡೆದುಕೊಂಡವರಿಗೆ ಐಡಿ ಕಾರ್ಡ್ ವಿತರಿಸಲಾಯಿತು. ರಿಜಿನಲ್ ವ್ಯಾಪ್ತಿಯ ಮೊಹಲ್ಲಾಗಳಿಂದ ಆಯ್ಕೆ ಗೊಳಿಸಿದ ಪ್ರತಿನಿಧಿಗಳಿಗೆ ಮಯ್ಯಿತ್ ಪರಿಪಾಲನಾ ಪ್ರಾಕ್ಟಿಕಲ್ ತರಬೇತಿ ನಡೆಸುವುದು, ಸ್ವಚ್ಛ ಕುಟುಂಬ ಸ್ವಸ್ಥ ಸಮಾಜ ಎಂಬ ಅಭಿಯಾನ ಹಮ್ಮಿಕೊಳ್ಳುವುದು, ಮದ್ರಸ ಅಧ್ಯಾಪಕರಿಗೆ ರಂಝಾನ್ ಪ್ರಯುಕ್ತ ಉಪಹಾರ ನೀಡುವುದು ಮುಂತಾದ ವಿವಿಧ ಯೋಜನೆಗಳನ್ನು ರೂಪಿಸಲಾಯಿತು.ತೆರವಾದ ಸಂಘಟನಾ ಕಾರ್ಯದರ್ಶಿ ಯಾಗಿ ನಿಝಾರ್ ಸಖಾಫಿ ಮುಡೂರು ಆಯ್ಕೆಯಾದರು. ಸಭೆಯಲ್ಲಿ ಎಸ್ ಎಂ ಎ ಕೋಶಾಧಿಕಾರಿ ಲತೀಫ್ ಹರ್ಲಡ್ಕ, ಉಪಾಧ್ಯಕ್ಷರುಗಳಾದ ಹಾಜಿ ಮುಸ್ತಫ ಕೆ ಎಂ, ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗೂ ವಿವಿಧ ಜಮಾಅತ್ ಪ್ರತಿನಿಧಿಗಳು ಭಾಗವಹಿಸಿದರು .ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.