ಸಂಪಾಜೆ ಕೂಲಿಶೆಡ್ಡ್ ಬಳಿ ಕಿಂಗರ್ ಫಾರ್ಮ್ ಆವರಣದ ಸ್ವಂತ ಕಟ್ಟಡದಲ್ಲಿ ಕೆ.ರವಿಶಂಕರ ಭಟ್ ಮಾಲಕತ್ವದ ಈಶ ಇಂಟೀರಿಯರ್ಸ್ ದ.30ರಂದು ವೈದಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿತು.
ಗಣ್ಯರಾದ ಕೀಲಾರು ರಾಜಾರಾಮ,ಟಿ.ಶ್ಯಾಮ್ ಭಟ್,ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ,ಉದ್ಯಮಿ ಪದ್ಮಯ್ಯ ಗೌಡ, ಕಲ್ಲುಗುಂಡಿ ಮಹಾವಿಷ್ಣುಮೂರ್ತಿ ದೈವಸ್ಥಾನ ಸಮಿತಿ ಅಧ್ಯಕ್ಷ ಶ್ರೀಧರ ಮಾದೆಯಪಾಲ್,ಸಂಪಾಜೆ ಸೊಸೈಟಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ,ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್,ಸದಸ್ಯ ಎಸ್.ಕೆ.ಹನೀಫ್,ಪಿ.ಬಿ,ಕಿಶೋರ್ ಕುಮಾರ್ ,ಬಿ.ಎಸ್.ಯಮುನಾ ಮೊದಲಾದವರು ಉಪಸ್ಥಿತರಿದ್ದರು. ಉದ್ಯಮದಲ್ಲಿ ಹತ್ತು ವರ್ಷಗಳ ಅನುಭವದೊಂದಿಗೆ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ನವನವೀನ ಮಾದರಿಯ ಮೋಡೆಲ್ ಕಿಚನ್,ವಾರ್ಡ್ ರೂಬ್ ಹಾಗೂ ಕಟ್ಟಡದ ಒಳಾಂಗಣ ವಿನ್ಯಾಸ ಮಾಡಿಕೊಡಲಾಗುವುದು.ಉತ್ತಮ ದರ್ಜೆಯ ಮರ ಬಳಸಿ ಅತ್ಯಾಧುನಿಕ ಶೈಲಿಯ ಪೀಠೋಪಕರಣ ಮತ್ತು ಮನೆ ನಿರ್ಮಾಣಕ್ಕೆ ಬೇಕಾದ ಮರದ ಸಲಕರಣೆಗಳನ್ನು ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.