Breaking News

ಜ.4 : ವರ್ತಕರ ಸಮುದಾಯ ಭವನ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ವಾಣಿಜ್ಯ ಕೈಗಾರಿಕೋದ್ಯಮಿಗಳ ಸಂಘ ಸುಳ್ಯ ಇದರ ನೂತನವಾಗಿ ನಿರ್ಮಾಣ ಗೊಂಡ ವರ್ತಕರ ಸಮುದಾಯ ಭವನ ಇದರ ಉದ್ಘಾಟನ ಸಮಾರಂಭ ಜ.4 ರಂದು ನಡೆಯಲಿದೆ ಎಂದು ವರ್ತಕರ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸುಧಾಕರ ರೈ ಯವರು ತಿಳಿಸಿದ್ದಾರೆ.
ವರ್ತಕರ ಸಮುದಾಯ ಭವನವನ್ನು ಸುಳ್ಯ ಶಾಸಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಉದ್ಘಾಟಿಸಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ನಾಮಫಲಕ ಅನಾವರಣಗೊಳಿಸಲಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ ಚಿದಾನಂದ,ಪದ್ಮಶ್ರೀ ಡಾ|ಗಿರೀಶ್ ಭಾರದ್ವಾಜ್,ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಯಪ್ರಕಾಶ್ ಕುಂಚಡ್ಕ,ಚನಿಯ ಕಲ್ತಡ್ಕ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ,ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ,ನಗರ ಪಂಚಾಯತ್ ಸದಸ್ಯೆ ಶೀಲಾ ಕುರುಂಜಿ ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದು ಅವರು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.
ವರ್ತಕರ ಸಂಘದ ಉಪಾಧ್ಯಕ್ಷ ಸಿ.ಎ ಗಣೇಶ್ ಭಟ್,ನಿರ್ದೇಶಕಾದ ಜಯಂತ ಕೆ ಶೆಟ್ಟಿ,ಜಗನ್ನಾಥ ಪಡ್ಪು ಹಾಜಿ ಹಮೀದ್ ಜನತಾ,ಕಾರ್ಯದರ್ಶಿ ಶಶಿಧರ ಶೆಟ್ಟಿ ಪಡ್ಪು,  ಅಬ್ದುಲ್ಲಾ ಕಟ್ಟೆಕ್ಕಾರ್, ಸದಸ್ಯ ರಾಜು ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಡಿ.ಎಸ್ ಗಿರೀಶ್ ಸ್ವಾಗತಿಸಿ ವಂದಿಸಿದರು.
ಸುಳ್ಯ ವಾಣಿಜ್ಯ ಕೈಗಾರಿಕೋದ್ಯಮಿಗಳ ಸಂಘ ಆರಂಭಗೊಂಡು ಸುಮಾರು 30 ವರ್ಷಗಳು ಸಂದಿದೆ. ನಮ್ಮ ಸಂಘಕ್ಕೆ ಸ್ವತಃ ನೆಲೆಯೊಂದು ಆಗಬೇಕು ಅದರಲ್ಲಿ ವರ್ತಕರ ಸಂಘಕ್ಕೆ ಒಂದು ಸೂರು ಆಗಬೇಕು ಎಂಬ ಕನಸು ಬಹಳ ವರ್ಷದಿಂದ ಇತ್ತು‌ ಈ ಎಲ್ಲಾ ಕನಸುಗಳು ಈಡೇರಿದ ದಿನ ಜ.4 ವರ್ತಕರ ಸಮುದಾಯ ಭವನ ಉದ್ಘಾಟನೆಗೊಳ್ಳುವ ಈ ಶುಭ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಮತ್ತು ನಮ್ಮ ಭವನದ ಸ್ಥಳ ಒದಗಿಸಿ ಕೊಡುವಲ್ಲಿ ಸಹಕರಿಸಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರುಗಳಿಗೂ,ಮಾಜಿ ಸದಸ್ಯರುಗಳಿಗೂ,ಅಧಿಕಾರಿಗಳಿಗೂ, ಹಾಗೂ ವಿಶೇಷವಾಗಿ ಸುಳ್ಯ ಶಾಸಕರು ಸಚಿವರಾದ ಅಂಗಾರರವರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದೆವೆ.
ಸಮುದಾಯ ಭವನ ನಿರ್ಮಾಣ ಕಾರ್ಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಎಲ್ಲಾ ನಿರ್ದೇಶಕರೂ,ಸದಸ್ಯರು ಸಹಕರಿಸಿದ್ದಾರೆ ಅಲ್ಲದೇ ಅನೇಕ ದಾನಿಗಳು ಸಹಕಾರ ನೀಡಿದ್ದಾರೆ ಎಲ್ಲರಿಗೂ ಈ ಉದ್ಘಾಟನೆ ಸಂದರ್ಭದಲ್ಲಿ ಕೃತಜ್ಞತೆಯೊಂದಿಗೆ ಸ್ಮರಿಸುತ್ತೆನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.