Breaking News

ಬಾಂಜಿಕೋಡಿಯಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆ

Advt_Headding_Middle

 


 

ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ.
ಮೃತ ದೇಹವು ಬಾಂಜಿಕೋಡಿ ನಿವಾಸಿ ದಿವಂಗತ ಮಾಧವ ರವರ ಪುತ್ರ ಅರುಣ್ ಕುಮಾರ್ ಬಾಂಜಿಕೋಡಿಯವರದ್ದೆಂದು ಗುರುತಿಸಲಾಗಿದ್ದು ಇವರು ಡಿ.31 ರಿಂದ ಮನೆಯಿಂದ ಕಾಣೆಯಾಗಿದ್ದರೆನ್ನಲಾಗಿದೆ. ಕಳೆದ ಎರಡು ದಿನಗಳಿಂದ ಸ್ಥಳೀಯರು ಮತ್ತು ಕುಟುಂಬಸ್ಥರು ಇವರನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆದರೆ ಇಂದು ಮುಂಜಾನೆ ರವಿಕುಮಾರ್ ರವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕುಟುಂಬಸ್ಥರಿಗೆ ಒಬ್ಬರಿಗೆ ಕಂಡಿರುತ್ತದೆ.
ಅರುಣ್ ಕುಮಾರ್ ರವರು ಉಪ್ಪಿನಂಗಡಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಮಾಸ್ಟರ್ ಪ್ಲಾನ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮೃತ ಅರುಣ್ ಕುಮಾರ್ ತಾಯಿ ವಿಮಲಾ ಪತ್ನಿ ವನಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.