Breaking News

ಬಳ್ಪ ಜಾತ್ರೋತ್ಸವ, ಬ್ರಹ್ಮ ರಥೋತ್ಸವ, ಬಳ್ಪ ಬೆಡಿ

Advt_Headding_Middle

 

ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾಾನ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 27ರಿಂದ 31ರ ತನಕ ವಿಜೃಂಭಣೆಯಿಂದ ಜರಗಿತು. ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ
ಡಿ. 27ರಂದು ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಶ್ರೀ ದೇವರ ಬಲಿ ಹೊರಟು ಉತ್ಸವ, ‘ದರ್ಶನ ಬಲಿ’ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನಸಂತರ್ಪಣೆ ನೆರವೇರಿತು.
ರಾತ್ರಿ ಮಹಾರಂಗ ಪೂಜೆ, ಉತ್ಸವ ಬಲಿ, ಪಲ್ಲಕ್ಕಿ ಉತ್ಸವ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಡಿ. 29ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಡಿ. 30ರಂದು
ಬೆಳಿಗ್ಗೆ ಬಡಗು ಮತ್ತು ತೆಂಕು ಅಂಗಣದ ಶಾಶ್ವತ ಚಪ್ಪರದ ಲೋಕಾರ್ಪಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಬಲಿ ಹೊರಟು ಬ್ರಹ್ಮರಥಾರೋಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಬ್ರಹ್ಮರಥೋತ್ಸವ, ಬಳ್ಪ ಬೆಡಿ ನಡೆಯಿತು‌. ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ಏಲಿಯನ್ ಪ್ರದರ್ಶನ ನಡೆಯಿತು.ಡಿ. 31 ರಂದು ಉತ್ಸವ ಬಲಿ, ದರ್ಶನ ಬಲಿ ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ಭೂರಿ ಸಮಾರಾಧನೆ ನಡೆಯಿತು.
ಸಾಯಂಕಾಲ ಕುಮಾರಧಾರಾ ನದಿಗೆ ಶ್ರೀ ಅವಭೃತಯಾತ್ರಾರಂಭಗೊಂಡುಕಟ್ಟೆಪೂಜೆಗಳು ನಡೆದು ಅವಭೃತೋತ್ಸವ ನಡೆಯಿತು.
ಡಿ. 30ರಂದು ಸಂಜೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಲಾವಿದರಿಂದ ಯಕ್ಷಗಾನಾರ್ಚನೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.