Breaking News

ಮರ್ಕಂಜ : ಬಲ್ನಾಡು ಪೇಟೆ ಯುವರಾಜ ಜೈನ್ ರವರ ವೈವಾಹಿಕ ಜೀವನದ ಸುವರ್ಣಮಹೋತ್ಸವದ ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle

 

ಮರ್ಕಂಜದ ಪಂಚಸ್ಥಾಪನೆಯ ಆಡಳಿತ ಮೊಕ್ತೇಸರರಾಗಿ ಯಕ್ಷಗಾನ ಮೇಳದ ಯಜಮಾನರಾಗಿ, ಕಲಾವಿದರಾಗಿ ಪ್ರಸ್ತುತ ಬಲ್ನಾಡು ಬಸದಿಯ ಆಡಳಿತ ಮೊಕ್ತೇಸರರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಬಲ್ನಾಡುಪೇಟೆ ಯುವರಾಜ ಜೈನ್ ಅವರ 75 ಸಂವತ್ಸರಗಳನ್ನು ಪೂರೈಸಿದ ಯುವರಾಜ ಜೈನ್ ದಂಪತಿಗಳ ವೈವಾಹಿಕ ಜೀವನದ ಸುವರ್ಣಮಹೋತ್ಸವದ ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಮರ್ಕಂಜ ದ ತೇರ್ಥಮಜಲು ಸರಕಾರಿ ಪ್ರೌಢಶಾಲೆಯ ಅಕ್ಷರ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಹಿರಿಯ ಯಕ್ಷಗಾನ ಕಲಾವಿದ ಹಾಗೂ ಅಭಿನಂದನಾ ಸಮಿತಿ ಅಧ್ಯಕ್ಷ ಜಗನ್ಮೋಹನ ರೈ ರೆಂಜಾಳ, ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹಾಬಲ ಕಟ್ಟಕ್ಕೋಡಿ, ನಯಕ್ಷಗಾನ ಕಲಾವಿದ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂಪ್ರಸಾದ್ ಗುಂಡಿ, ಮರ್ಕಂಜ ಗ್ರಾ.ಪಂ.ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಮರ್ಕಂಜ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಗಣೇಶ್ ರೈ ಪಾರೆಪ್ಪಾಡಿ, ಅಭಿನಂದನಾ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಜೈನ್, ಬಲ್ನಾಡುಪೇಟೆ ಜೈನ ಬಸದಿಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹಾವೀರ ಜೈನ್, ಮಿತ್ತಡ್ಕದ ಸುದ್ದಿ ಪ್ರತಿನಿಧಿ ದಾಮೋದರ ಪಾಟಾಳಿ, ಮಂಜುನಾಥ್ ಬೆನಕ ಉಪಸ್ಥಿತರಿದ್ದರು. ಯುವರಾಜ ಜೈನ್ ರವರ ಪುತ್ರ ಮೂಡಬಿದಿರೆ ಕಾಲೇಜಿನ ಉಪನ್ಯಾಸಕ ಪ್ರಭಾತ್ ಜೈನ್ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.