Breaking News

ಯೇನೆಕಲ್ಲು ಸೊಸೈಟಿ ನಿರ್ದೇಶಕರಾಗಿ ಶ್ರೀಮತಿ ನವೀನ ದೇವರಾಜ್ ಅವಿರೋಧ ಆಯ್ಕೆ

Advt_Headding_Middle

 

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕರಾಗಿದ್ದ ಕೆ.ಎಸ್. ದೇವರಾಜ್ ನಿಧನದಿಂದಾಗಿ ತೆರವಾಗಿದ್ದ ಒಂದು ನಿರ್ದೇಶಕನ ಸ್ಥಾನಕ್ಕೆ ಉಪ ಚುನಾವಣೆ ಘೋಷಿಸಲ್ಪಟ್ಟು ಕೆ.ಎಸ್. ದೇವರಾಜ್ ರ ಪತ್ನಿ ಶ್ರೀಮತಿ ನವೀನ ದೇವರಾಜ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಜ. 9ರಂದು ನಡೆಸುವ ಉದ್ದೇಶದಿಂದ ಡಿ. ೨೮ರಿಂದ ಆಕಾಂಕ್ಷೆಯುಳ್ಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿತ್ತು. ಜ. ೧ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಶ್ರೀಮತಿ ನವೀನ ದೇವರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಜ. ೨ರಂದು ನಾಮಪತ್ರ ಪರಿಶೀಲನೆ ನಡೆದು ಅವರ ನಾಮಪತ್ರ ಕ್ರಮಬದ್ಧವಾಗಿದ್ದುದರಿಂದ ಅವಿರೋಧ ಆಯ್ಕೆ ನಡೆದಿದೆ. ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಇದರ ಕಚೇರಿ ಅಧೀಕ್ಷಕರಾದ ಬಿ. ನಾಗೇಂದ್ರ ಚುನಾವಣಾ ಅಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.