Breaking News

ಬಾಳಿಲ: ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ಆಶ್ರಯದಲ್ಲಿ ಉದ್ಯೋಗ ಮಾಹಿತಿ ಕಾರ್ಯಾಗಾರ

Advt_Headding_Middle

 

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ- ಮುಪ್ಪೇರ್ಯ ಇದರ 5ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳಲ್ಲಿ ಜ. 2ರಂದು ಉದ್ಯೋಗ ಮಾಹಿತಿ ಕಾರ್ಯಕ್ರಮ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಹಿರಿಯರಾದ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಚಾಕೊಟೆಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಾಳಿಲ ಗ್ರಾ.ಪಂ. ಮಾಜಿ ಸದಸ್ಯೆ ಶ್ರೀಮತಿ ವಾರಿಜ ಬೊಳಿಯಕಂಡ, ಭಾರತೀಯ ಕಿಸಾನ್ ಸಂಘದ‌ ಬಾಳಿಲ‌ ವಲಯಾಧ್ಯಕ್ಷ‌ ರಾಜಾರಾಮ ಭಟ್ ನಿಡ್ಮಾರು, ಗ್ರಾ.ಪಂ. ಸದಸ್ಯರಾದ ಹರ್ಷ ಜೋಗಿಬೆಟ್ಟು, ಶ್ರೀಮತಿ ಪವನ, ಶ್ರೀಮತಿ ಸುಶೀಲಾ ಕಾಪಡ್ಕ, ಡಿ.ಕೆ.ಆರ್.ಡಿ.ಎಸ್.ನ‌ ಮೇಲ್ವಿಚಾರಕ ರಾಜೇಶ್ ಅಯ್ಯನಕಟ್ಟೆ, ನಾಗರಿಕ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಶ್ರೀ ಮಂಜುನಾಥೇಶ್ವರ ಜಾನಪದ ಸಂಘದ ಅಧ್ಯಕ್ಷ ಕಾಂತು ಬಾಳಿಲ ಅತಿಥಿಗಳಾಗಿ ಭಾಗವಹಿಸಿದ್ದರು. ದುಗಲಡ್ಕ ಸರಕಾರಿ ಪ್ರೌಢಶಾಲಾ ಶಿಕ್ಷಕ ಉಣ್ಣಿಕೃಷ್ಣನ್, ಬೆಳ್ಳಾರೆ ಪೊಲೀಸ್ ಠಾಣಾ ಪಿ.ಎಸ್. ಐ. ಆಂಜನೇಯ ರೆಡ್ಡಿ, ಮೆಸ್ಕಾಂ ವಿಭಾಗದ ಹರೀಶ್ ದೋಳ್ತಿಲ, ಡೆಪ್ಯುಟಿ ತಹಶಿಲ್ದಾರ್ ಚಂದ್ರಕಾಂತ ಎಂ.ಆರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದರು. ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಶಿಕ್ಷಕ ಪುರಂದರ ನಾರಾಯಣ ಭಟ್ ಸಮನ್ವಯಕಾರರಾಗಿ ಭಾಗವಹಿಸಿದ್ದರು. ಸಿಂಗಾರಿ ಮೇಳದ ಅಧ್ಯಕ್ಷ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಶಿಕ್ಷಕ ಲೋಕೇಶ್ ಬೆಳ್ಳಿಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು.‌ಅನ್ವಿತಾ ಕಲ್ಮಡ್ಕ ಪ್ರಾರ್ಥಿಸಿದರು. ಶ್ರೀಮತಿ ವನಿತಾ ಸಚಿತ್ ವಂದಿಸಿದರು. ಕು. ರಕ್ಷಾ ಎಂ ಮತ್ತು ಕು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಶಾಲು ಹೊದಿಸಿ‌ ಸನ್ಮಾನಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.