Breaking News

ಜ.3 ರಂದು ಸುಬ್ರಹ್ಮಣ್ಯದಲ್ಲಿ ಭೂಗತ ಕೇಬಲ್, 8 ಮೇಘಾ ವೋಲ್ಟ್ ಪರಿವರ್ತಕ ಉದ್ಘಾಟನೆ

Advt_Headding_Middle

ಸುಬ್ರಹ್ಮಣ್ಯದಲ್ಲಿ ಭೂಗತ ಕೇಬಲ್ ಮತ್ತು 8 ಮೇಗಾ ವೋಲ್ಟ್ ಪರಿವರ್ತಕ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಇಂಧನ ಸಚಿವ ಸುನೀಲ್ ಕುಮಾರ್ ಜ. 3 ರಂದು ಮಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಅಂಗಾರ ವಹಿಸಲಿದ್ದು, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಯತಿಗಳಾಗ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ, ಸಂಸದರು, ಮಂತ್ರಿಗಳು, ವಿಧಾನ ಪರಿಷತ್, ದ.ಕ ಜಿಲ್ಲಾ ವಿಧಾನ ಸಭಾ ಸದಸ್ಯರು, ಡಿ.ಸಿ, ಎ ಸಿ ಮತ್ತಿತರರು ಭಾಗವಹಿಸಲಿದ್ದಾರೆ.

ಗುತ್ತಿಗಾರು ಮೆಸ್ಕಾಂ ಸಬ್ ಸ್ಟೇಶನ್ ನಿಂದ ಸುಬ್ರಹ್ಮಣ್ಯ ಮೆಸ್ಕಾಂ ವೆರೆಗೆ ರಸ್ತೆ ಬದಿ ಭೂಮಿ ಅಗೆದು ಕೇಬಲ್ ಮೂಲಕ ವಿದ್ಯುತ್ ಸರಬರಾಜು ಮ‍ಾಡುವ ಭೂಗತ ಕೇಬಲ್ ಮತ್ತು ಸುಬ್ರಹ್ಮಣ್ಯ ಸಬ್ ಸ್ಟೇಶನ್ ಗೆ 8 ಮೆಗಾ ವೋಲ್ಟ್ ನ ನ ಟ್ರಾನ್ಸ್‌ಫಾರ್ಮರ್ ಲೋಕಾರ್ಪಣೆ ಆಗಲಿರುವ ಕಾಮಗಾರಿಗಳು.

ಗುತ್ತಿಗಾರಿನಿಂದ 17.5 ಕಿ.ಮೀ ಭೂಗತ ಕೇಬಲ್ ಅಳವಡಿಸಲಾಗಿದ್ದು ಇದರಲ್ಲಿ 33 ಕೆ ವಿ ವಿದ್ಯುತ್ ಸರಬರಾಜು ಆಗಲಿದೆ. ಗುತ್ತಿಗಾರು ಸಬ್ ಸ್ಟೇಷನಿಗೆ ಬೆಳ್ಳಾರೆ – ಬಳ್ಳಕ್ಕ ಮಾರ್ಗವಾಗಿ ಬಂದ 33ಕೆ ವಿ ವಿದ್ಯುತ್‌ ಸರಬರಾಜು ಆಗುತಿದ್ದು ಅದು ಇನ್ನು ಮುಂದೆ ಭೂಗತ ಕೇಬಲ್ ಮುಖಾಂತರ ಸುಬ್ರಹ್ಮಣ್ಯ ಸಬ್ ಸ್ಟೇಶನ್ ಗೆ ವರಗೆ ಹೋಗಲಿದೆ. ಅದೇ ರೀತಿ ಸುಬ್ರಹ್ಮಣ್ಯದಿಂದ ಗುತ್ತಿಗಾರಿಗೂ ವಿದ್ಯುತ್‌ ಬರಲಿದೆ. ಗುತ್ತಿಗಾರು ಅಥವಾ ಸುಬ್ರಹ್ಮಣ್ಯದ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಸಮಸ್ಯೆಗಳು ಆದಲ್ಲಿ ಅದು ಮುಂದಿನ ದಿನಗಳಲ್ಲಿ ಪರಿಹಾರವಾಗಲಿದೆ. ಅಂದರೆ ಗುತ್ತಿಗಾರು ಬಳ್ಳಕ್ಕ ಬೆಳ್ಳಾರೆ ವಿದ್ಯುತ್‌ ಲೈನ್ ವ್ಯತ್ಯಯದಿಂದಾಗಿ ಗುತ್ತಿಗಾರಿಗೆ ವಿದ್ಯುತ್‌ ಬರದಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಗುತ್ತಿಗಾರಿಗೆ ವಿದ್ಯುತ್‌ ಬರಲಿದೆ. ಅದೇ ರೀತಿ ಗುತ್ತಿಗಾರು ಲೈನ್ ವ್ಯತ್ಯಯ ಆದಲ್ಲಿ ಸುಬ್ರಹ್ಮಣ್ಯದಿಂದ ವಿದ್ಯುತ್ ಗುತ್ತಿಗಾರಿಗೆ ಬರಲಿದೆ. ಮುಖ್ಯವಾಗಿ ಅಡಚಣೆ ರಹಿತ ವಿದ್ಯುತ್ ವ್ಯವಸ್ಥೆ ಒದಗಲಿದೆ. ಇದರಿಂದ ಸುಮಾರು 20000 ಗ್ರಾಹಕರಿಗೆ ಪ್ರಯೋಜನವಾಗಲಿದೆ.

8 ಮೆಗಾ ವೋಲ್ಟ್ ಪರಿವರ್ತಕ:
ಸುಬ್ರಹ್ಮಣ್ಯದಲ್ಲಿ ಈ ಹಿಂದೆ 6 ಮೆಗಾ ವೋಲ್ಟ್ ಪರಿವರ್ತಕ ಇದ್ದು ಅದನ್ನು 8 ಮೆಗಾ ವೋಲ್ಟ್ ನ ಪರಿವರ್ತಕನ್ನಾಗಿಸಲಾಗಿದೆ. ಹೊಸದಾಗಿ ಏನೆಕಲ್ಲು, ಕೈ ಕಂಬ, ಸುಬ್ರಹ್ಮಣ್ಯ ಫೀಡರ್ ಗೆ ಚಾಲನೆ ದೊರೆಯಲಿದೆ. ಇದರಿಂದ ಏನೆಕಲ್ಲು, ಐನೆಕಿದು, ಬಿಳಿನೆಲೆ,ಸುಬ್ರಹ್ಮಣ್ಯ,ನಾಲ್ಕೂರಿನ ವಿದ್ಯುತ್‌ ವ್ಯವಸ್ಥೆಯ ಸಮಸ್ಯೆ ಪರಿಹಾರವಾಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.