Breaking News

ದುಗ್ಗಲಡ್ಕ – ನೀರಬಿದಿರೆ- ಕೊಡಿಯಾಲಬೈಲ್ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ದುಗ್ಗಲಡ್ಕದಲ್ಲಿ ಸಾರ್ವಜನಿಕ ಸಭೆ

Advt_Headding_Middle

 

ಸಾಮೂಹಿಕ ಭಿಕ್ಷಾಟನೆ ಮಾಡಿಯಾದರೂ ಹಣ ಸಂಗ್ರಹಿಸುತ್ತೇವೆ;ನಾಗರಿಕರ ಆಕ್ರೋಶ

ಅನುದಾನದ ಬಗ್ಗೆ ತಿಳಿಯಲು ಸಚಿವರಲ್ಲಿಗೆ 3 ದಿನದಲ್ಲಿ ನಿಯೋಗ: ವಿನಯಕುಮಾರ್

ಕಳೆದ 25 ವರ್ಷಗಳಿಂದ ಅಭಿವೃದ್ಧಿಯಾಗದ ಈ ಪ್ರಮುಖ ರಸ್ತೆ ಜನಪ್ರತಿನಿಧಿಗಳ ಭರವಸೆಯಲ್ಲೇ ಕಳೆಯುವಂತಾಗಿದೆ‌,ನಡೆದಾಡಲು ಸಾಧ್ಯವಿಲ್ಲದ ಈ ರಸ್ತೆಯನ್ನು ಅತೀ ಶೀಘ್ರದಲ್ಲೇ ಅಭಿವೃದ್ಧಿ ಮಾಡಿಕೊಡಬೇಕೆಂದು ಆಗ್ರಹಿಸಿ ದುಗ್ಗಲಡ್ಕ- ನೀರಬಿದಿರೆ- ಕೊಡಿಯಾಲಬೈಲ್ ರಸ್ತೆಯ ಫಲಾನುಭವಿ ನಾಗರಿಕರು ಜ.2 ರಂದು ದುಗ್ಗಲಡ್ಕದಲ್ಲಿ ಸೇರಿ ಸಭೆ ನಡೆಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಮನೋಜ್ ಪಾನತ್ತಿಲ ಮಾತನಾಡಿ ಈ ರಸ್ತೆಗೆ ಬೇಕಾಗಿ ಹಲವಾರು ಪ್ರತಿಭಟನೆ ಮಾಡಿದ್ದೇವೆ.ಹಲವಾರು ಮನವಿಯನ್ನು ಜನಪ್ರತಿನಿಧಿಗಳಿಗೆ ನೀಡಿದ್ದೇವೆ.ಏನೂ ಪ್ರಯೋಜನವಾಗಿಲ್ಲ. ಬಂಡೆ ಕಲ್ಲಿನ ಮೇಲೆ ನೀರು ಸುರಿದಂತೆ ಆಗಿದೆ. ಸುಳ್ಯ ನಗರ ಪಂಚಾಯತ್ ಮತ್ತು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗೆ ಸೇರಿದ ಪ್ರಮುಖ ರಸ್ತೆ ಇದಾಗಿದ್ದು, ಪಂಚಾಯತ್ ಸದಸ್ಯನಿಂದ ಹಿಡಿದು ಕೇಂದ್ರದವರೆಗೆ ಅಧಿಕಾರವಿದೆ‌. ಅನುಕೂಲವಿದ್ದು ಅನುದಾನ ತರಲು ಯಾಕೆ ಸಾಧ್ಯವಾಗುವುದಿಲ್ಲ.ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹೀಗಾಗುತ್ತದೆ ಎಂದು ಹೇಳಿದರು.
ಹೋರಾಟದ ಸಂಘಟಕರಾದ ಬಾಲಕೃಷ್ಣ ನಾಯರ್ ನೀರಬಿದಿರೆ ಮಾತನಾಡಿ ಈ ರಸ್ತೆಗೆ ಬೇಕಾಗಿ ಪ್ರತಿಭಟನೆ,ಮನವಿ ನೀಡಿ ಸಾಕಾಗಿದೆ.ಇನ್ನು ಯಾರಿಗೂ ಮನವಿ ಕೊಟ್ಟು ಅಂಗಲಾಚುವ ಪ್ರಶ್ನೆಯೇ ಇಲ್ಲ. ಜನಪ್ರತಿನಿಧಿಗಳ ಎಲ್ಲಾ ಭರವಸೆಯೂ ಭರವಸೆಯಾಗಿಯೇ ಉಳಿದಿದೆ.ಸರಕಾರದ ಬಳಿ ಹೋದ ಪ್ರಸ್ತಾವನೆಗೆ ಯಾರಲ್ಲಿಯೂ ಉತ್ತರವಿಲ್ಲ. ಸರಕಾರದ ಬಳಿ ದುಡ್ಡುವಿಲ್ಲವಾದರೆ ಸಾಮೂಹಿಕವಾಗಿಯಾದರೂ ಭಿಕ್ಷೆ ಬೇಡಿಯಾದರೂ ಹಣ ಸಂಗ್ರಹಿಸಿ ರಸ್ತೆ ಮಾಡುತ್ತೇವೆ.ಫೆಬ್ರವರಿ ಒಳಗೆ ಈ ಬಗ್ಗೆ ಸ್ಪಷ್ಟತೆ ಬೇಕು ಎಂದು ಹೇಳಿದರು. ಬಳಿಕ ಸೇರಿದ ನಾಗರಿಕರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದರು.
ಅನುದಾನದ ಬಗ್ಗೆ ತಿಳಿದು, ಕಾಮಗಾರಿ ಶೀಘ್ರವಾಗುವಂತೆ ಸಚಿವರಲ್ಲಿಗೆ 3 ದಿನದಲ್ಲಿ ನಿಯೋಗ
ಸಭೆಗೆ ಆಗಮಿಸಿದ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ ಈ ರಸ್ತೆ ಸಮಸ್ಯೆಯ ಬಗ್ಗೆ ಈ ವಾರ್ಡ್ ಗಳ ಸದಸ್ಯರು ಪದೇ ಪದೇ ಗಮನಕ್ಕೆ ತರುತ್ತಾರೆ.ಮತ್ತು ಈ ಭಾಗದ ಜನರು ಮಾಡಿದ ಪ್ರತಿಭಟನೆ ತಿಳಿದಿದೆ. ಆದರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಸಾಧ್ಯವಾಗಿಲ್ಲ.ಈಗ ಸುಳ್ಯದಿಂದ ಮಲ್ನಾಡ್ ಶಾಲೆವರೆಗಿನ ರಸ್ತೆ ಮತ್ತು ಕೊಡಿಯಾಲಬೈಲ್ ಸೇತುವೆಗೆ 11 ಕೋಟಿ ರೂಪಾಯಿ ಮಂಜೂರು ಗೊಂಡಿದೆ. ಅದಕ್ಕಿಂತ ಈಚೆ ದುಗ್ಗಲಡ್ಕದವರೆಗಿನ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂಪಾಯಿ ಪ್ರಸ್ತಾವನೆಯ ಹಂತದಲ್ಲಿದೆ‌.ಮತ್ತೊಂದು ಯೋಜನೆಯಿಂದ ರೂ.85 ಲಕ್ಷ ಅನುದಾನ ನೀಡುವ ಪ್ರಸ್ತಾವನೆಯೂ ಇದೆ ಎಂದು ಹೇಳಿದರು. ಹಾಗಾದರೆ ಈ ರಸ್ತೆ ಆಗುವುದು ಯಾವಾಗ ಎಂದು ನಾಗರಿಕರು ಕೇಳಿದರು ಅದಕ್ಕೆ ಉತ್ತರಿಸಿದ ಅಧ್ಯಕ್ಷರು ದೊಡ್ಡ ಮೊತ್ತದ ಕಾಮಗಾರಿಯಾಗಿರುವುದರಿಂದ ಇವತ್ತಿಂದ ನಾಳೆಗೆ ಕೆಲಸವಾಗುವುದಿಲ್ಲ.ಕನಿಷ್ಟ ವೆಂದಾದರೂ ಎರಡು ವರ್ಷ ಬೇಕಾಗಬಹುದು.ಅದಕ್ಕಾಗಿ 85ಲಕ್ಷ ಉಪಯೋಗಿಸಿ ಡಾಮರೀಕರಣವಾದರೂ ಮಾಡಲು ಯತ್ನಿಸುತೇನೆ ಎಂದು ಹೇಳಿದರು.ಮುಂದಿನ ಕ್ರಮದ ಬಗ್ಗೆ ಜನರು ಕೇಳಿದಾಗ 3 ದಿನದ ಒಳಗೆ ನಿಮ್ಮನ್ನು ಸಚಿವರಲ್ಲಿಗೆ ಕರೆದುಕೊಂಡು ಹೋಗುತ್ತೇನೆ.ಅನುದಾನದ ಕುರಿತು ಮಾಹಿತಿ ತಿಳಿದು ಶೀಘ್ರವಾಗಿ ಕೆಲಸ ಆಗುವಂತೆ ಒತ್ತಡ ಮಾಡುವ ಬಗ್ಗೆ ಹೇಳಿದರು.
ನ.ಪಂ ಸದಸ್ಯೆ ಶಶಿಕಲಾ ನೀರಬಿದಿರೆ ಆಗಮಿಸಿದರು. ಫಲಾನುಭವಿ ನಾಗರಿಕರಾದ ಚಂದ್ರ ಶೇಖರ ಮದಕ,ಜಯರಾಮ ಪಾನತ್ತಿಲ,ಮೋಹನ್ ಬೇರ್ಪಡ್ಕ,ಇಬ್ರಾಹಿಂ ನೀರಬಿದಿರೆ, ನಾರಾಯಣ ಮಣಿಯಾಣಿ,ಶಂಬಯ್ಯ ಪಾರೆ,ಬಶೀರ್ ನೀರಬಿದಿರೆ, ಹರೀಶ್ ಕಮಿಲಡ್ಕ,ಆನಂದ ಗೌಡ ನೀರಬಿದಿರೆ,ಜನಾರ್ದನ ಪಾಟಾಳಿ,ಸುರೇಶ್ ಪಾನತ್ತಿಲ,ಅಪ್ಪಯ್ಯ ಮಣಿಯಾಣಿ,ಬಾಲಕೃಷ್ಣ ರೈ ನೀರಬಿದಿರೆ, ಕಿಶೋರ್ ಯಾದವ್, ದೀಕ್ಷಿತ್ ಪಾನತ್ತಿಲ,ಶಿವಾನಂದ ಕಮಿಲಡ್ಕ,ಭರತ್ ಪಾನತ್ತಿಲ,ಲಕ್ಷ್ಮಣ ಬಳ್ಳಡ್ಕ,ವಸಂತ ಗರ್ನಡ್ಕ, ಪ್ರಕಾಶ್ ರೈ, ರವಿಚಂದ್ರ ಈಶ್ವರಡ್ಕ,ಶಿವಪ್ರಸಾದ್ ಕುದ್ಪಾಜೆ,ಕರೀಂ ನೀರಬಿದಿರೆ,ಜೋಕಿ ಕೊರಗ,ರತನ್,ಸುಪ್ರೀತ್ ನೀರಬಿದಿರೆ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ನೀರಬಿದಿರೆ ವಂದಿಸಿದರು.

ಸುಳ್ಳು ಭರವಸೆ ಸಾಕಾಗಿದೆ; ಮೋಹನ್ ಬೇರ್ಪಡ್ಕ
ನಗರ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಕಂದಡ್ಕ ಮಾತನಾಡುತ್ತಾ 11ಕೋಟಿಯ ವಿಚಾರ ಹೇಳುತ್ತಿರುವಾಗ ಮಾಜಿ ಗ್ರಾ.ಪಂ‌.ಸದಸ್ಯ ಮೋಹನ್ ಬೇರ್ಪಡ್ಕರವರು ಕಳೆದ ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಂದ ಸುಳ್ಳು ಭರವಸೆಯನ್ನು ಕೇಳಿಕೊಂಡು ಬಂದಿದ್ದೇವೆ‌. ಇನ್ನೂ ರಸ್ತೆ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿದರು. ಆಗ ಅಧ್ಯಕ್ಷರು ನನಗೆ ಸುಳ್ಳು ಹೇಳುವ ಅಗತ್ಯ ಇಲ್ಲ. ನಾನು ನಿಜ ವಿಷಯ ತಿಳಿಸಲು ಬಂದಿದ್ದೇನೆ.ಯಾವುದೇ ಭರವಸೆ ನೀಡುವುದಿಲ್ಲ. ಎಂದರು.
ನಮ್ಮ ಎರಡೂ ವಾರ್ಡ್ ನ ಬಗ್ಗೆ ನಗರ ಪಂಚಾಯತ್ ನಿರ್ಲಕ್ಷ್ಯ ಮಾಡುತ್ತಿದೆ. ಕಸದ ವಾಹನ ಕೂಡ ಬರುವುದಿಲ್ಲ. ನಗರ ಪಂಚಾಯತ್ ನಿಂದ ನಮ್ಮನ್ನು ಬಿಟ್ಡು ಬಿಡಿ ಎಂದು ಚಂದ್ರಶೇಖರ ಮದಕ ಹೇಳಿದರು. ಈ ರಸ್ತೆಯ ಬಗ್ಗೆಗಿನ ಪ್ರಸ್ತಾವನೆ ಕೇಳಿ ಕೇಳಿ ಸಾಕಾಗಿದೆ ಶೀಘ್ರ ಹಣ ಬಿಡುಗಡೆಯಾಗಬೇಕು ಎಂದು ಮಾಜಿ ನ.ಪಂ.ಸದಸ್ಯ ಇಬ್ರಾಹಿಂ ಜನಪ್ರಿಯ ಹೇಳಿದರು.

ಬ್ಯಾನರ್ ಅಳವಡಿಕೆಗೆ ನಿರ್ಧಾರ- ಅಂತಿಮ ಹಂತದಲ್ಲಿ ರದ್ದು
ಹೋರಾಟ ಸಮಿತಿಯಿಂದ ಪ್ರತಿಭಟನೆಯೊಂದಿಗೆ ಬ್ಯಾನರ್ ಅಳವಡಿಸಲು ನಿರ್ಧರಿಸಿ ಕರಪತ್ರ ಹಂಚಲಾಗಿತ್ತು. ಜನಪ್ರತಿನಿಧಿಗಳೇ ಇನ್ನಾದರೂ ಈ ರಸ್ತೆಗೆ ಅನುದಾನ ಒದಗಿಸಿ ಎಂದು ಬರೆದ ಬ್ಯಾನರ್ ಸಿದ್ದಗೊಳಿಸಲಾಗಿತ್ತು. ಆದರೆ ನಗರ ಪಂಚಾಯತ್ ಅಧ್ಯಕ್ಷರ ಸಹೋದರ ಹೇಮಂತ ಕುಮಾರ್ ಪೋನ್ ಮಾಡಿ ರಸ್ತೆಯ ಅನುದಾನ ವಿಚಾರವಾಗಿ ಪ್ರಸ್ತಾವನೆಯ ಹಂತದಲ್ಲಿರುವುರಿಂದ ನೀವು ಈಗ ಬ್ಯಾನರ್ ಹಾಕಿದರೆ ಕಾಮಗಾರಿಗೆ ತೊಂದರೆಯಾದಿತು ಎಂಬಿತ್ಯಾದಿ ತಾಕೀತು ಮಾಡಿದುದರಿಂದ ಬ್ಯಾನರ್ ಅಳವಡಿಸುವ ಕಾರ್ಯವನ್ನು ಕೈ ಬಿಟ್ಟು ಪ್ರತಿಭಟನೆ ಮಾತ್ರ ಮಾಡಲಾಯಿತೆಂದು ತಿಳಿದುಬಂದಿದೆ.

ಹೋರಾಟ ಸಮಿತಿ ರಚಿಸಲು ನಿರ್ಧಾರ
ಸಚಿವರ ಭೇಟಿಯ ಬಳಿಕ ಹೋರಾಟ ಸಮಿತಿಯನ್ನು ಮಾಡಿಕೊಂಡು ಮುಂದಿನ ಹಂತದ ಕಾರ್ಯಯೋಜನೆ ತಯಾರಿಸಿ ಮುಂದುವರಿಯುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.