Breaking News

 ಐನೆಕಿದು ನಿಸರ್ಗ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ, ಪದಗ್ರಹಣ

Advt_Headding_Middle

ನಿಸರ್ಗ ಯುವಕ ಮಂಡಲದ ಮುಂದಿನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಮಾನ್ಯ ಸಭೆ ಡಿ. 2 ಐನೆಕಿದು ಹಿ.ಪ್ರಾ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ-ಐನೆಕಿದು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಕಿಶೋರ್ ಕುಮಾರ್ ಕೂಜುಗೋಡು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ, ಐನೆಕಿದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ್ ಕಟ್ರಮನೆ, ನಿಸರ್ಗ ಯುವಕ ಮಂಡಲದ ಅಧ್ಯಕ್ಷ ಲಕ್ಮೀಶ್ ಇಜಿನಡ್ಕ, ನಿಯೋಜಿತ ಅಧ್ಯಕ್ಷರಾದ ಅಜಿತ್ ಕಲ್ಲೇರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನಿಸರ್ಗ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷರುಗಳು, ಗ್ರಾಮ ಪಂಚಾಯತ್ ಸದಸ್ಯರುಗಳು ಯುವಕ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದರು.

2022ನೇ ಸಾಲಿನ ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾಗಿ ಅಜಿತ್ ಕಲ್ಲೇರಿ, ಉಪಾಧ್ಯಕ್ಷ ಅಶೋಕ ಐಪಿನಡ್ಕ, ಕಾರ್ಯದರ್ಶಿಯಾಗಿ ಭರತ್ ವಾಡ್ಯಪ್ಪನಮನೆ, ಜೊತೆ ಕಾರ್ಯದರ್ಶಿ ಕುಶನ್ ನೆಕ್ರಾಜೆ, ಕೋಶಾಧಿಕಾರಿ ಸುಹಾಸ್ ಕೋಟೆಬೈಲ್, ಕ್ರೀಡಾ ಕಾರ್ಯದರ್ಶಿ ಧನುಷ್ ಪೈಲಾಜೆ, ಸಾಂಸ್ಕೃತಿಕ ಕಾರ್ಯದರ್ಶಿ, ಮನೀಶ್ ಕುಜುಂಬಾರು, ಸದಸ್ಯರುಗಳಾಗಿ ಬುಕ್ಷಿತ್ ನಿರ್ಪಾಡಿ, ಕುಸುಮಾಧರ ದಡ್ಡು ಆಯ್ಕೆಯಾದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.