ಬೆಳ್ಳಾರೆ : ಬಸ್ ಕಂಡಕ್ಟರ್ ಗೆ ಹಲ್ಲೆ – ಪ್ರಕರಣ ದಾಖಲು

Advt_Headding_Middle

ಬೆಳ್ಳಾರೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದವನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಸುಳ್ಯದಿಂದ ಬೆಳಿಗ್ಗೆ ಬೆಳ್ಳಾರೆ ಕಡೆಗೆ ಹೋಗುವ ಬಸ್ಸಿಗೆ ಐವರ್ನಾಡಿನಲ್ಲಿ ಪುರುಷೋತ್ತಮ ಎಂಬವರು ಬಸ್ ಹತ್ತಿದರೆನ್ನಲಾಗಿದೆ.
ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ನೀಡುವಾಗ ಪ್ರಯಾಣಿಕನು ರೂ.100 ರ ನೋಟನ್ನು ನೀಡಿದರೆನ್ನಲಾಗಿದೆ.ನಿರ್ವಾಹಕ ವಸಂತ ಕೆ.ಆರ್.ಎಂಬವರು ರೂ.100 ಪಡೆದುಕೊಂಡು ಚಿಲ್ಲರೆ ಮತ್ತೆ ಕೊಡುವುದಾಗಿ ಟಿಕೆಟ್ ಹಿಂಬದಿಯಲ್ಲಿ 90 ಕೊಡಲು ಬಾಕಿ ಇದೆ ಎಂದು ಬರೆದರೆನ್ನಲಾಗಿದೆ.
ಬೆಳ್ಳಾರೆ ಬಸ್ಟೇಂಡ್ ಬರುವಾಗ ಪ್ರಯಾಣಿಕರು ಚಿಲ್ಲರೆಯನ್ನು ನಿರ್ವಾಹಕನ ಜೊತೆ ಕೇಳಿದ್ದು ನಿರ್ವಾಹಕನಲ್ಲಿ ಚಿಲ್ಲರೆ ಇಲ್ಲದೆ ಪಕ್ಕದ ಅಂಗಡಿಯಲ್ಲಿ ಕೇಳಿ ಬರುವುದಾಗಿ ಹೇಳಿ ಹೋದರೆನ್ನಲಾಗಿದೆ.
ಅಂಗಡಿಯಲ್ಲಿ ಚಿಲ್ಲರೆ ಪಡೆದು ಬರುವಾಗ ತಡವಾಯಿತೆನ್ನಲಾಗಿದೆ.
ಪುರುಷೋತ್ತಮರಿಗೆ ಬೆಳ್ಳಾರೆ ಯಿಂದ ಪುತ್ತೂರು ಹೋಗಲಿಕ್ಕಿದ್ದು ಆಗಲೇ ಬಸ್ಟೇಂಡ್ ನಿಂದ ಪುತ್ತೂರು ಬಸ್ ಹೊರಟಿದ್ದು ಇವರಿಗೆ ಚಿಲ್ಲರೆ ಸಿಗುವಾಗ ಬಸ್ ತಪ್ಪಿತೆನ್ನಲಾಗಿದೆ.
ಇದರಿಂದ ಕೋಪಗೊಂಡ ಪ್ರಯಾಣಿಕ ನಿರ್ವಾಹಕನ ಜೊತೆ ಮಾತಿಗಿಳಿದಿದ್ದು ಮಾತಿಗೆ ಮಾತು ಬೆಳೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದನೆನ್ನಲಾಗಿದೆ.
ಈ ಬಗ್ಗೆ ಬಸ್ ಕಂಡಕ್ಟರ್ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಬಸ್ ಪ್ರಯಾಣಿಕ ಪುರುಷೋತ್ತಮರವರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.