Breaking News

ಸುಳ್ಯದ 110 ಕೆ.ವಿ. ಸಬ್‌ಸ್ಟೇಶನ್ ಸಮಸ್ಯೆ ಪರಿಹಾರಕ್ಕೆ ಕ್ರಮ : ಸಚಿವ ವಿ.ಸುನಿಲ್ ಕುಮಾರ್

Advt_Headding_Middle

ಸುಳ್ಯದ ಬಹು ಬೇಡಿಕೆಯಾದ 110 ಕೆ.ವಿ.ಸಬ್‌ಸ್ಟೇಶನ್ ಅನುಷ್ಠಾನಗೊಳ್ಳಲು ಅರಣ್ಯದ ಸಮಸ್ಯೆ ಎದುರಾಗಿದ್ದು ಇದರ ಪರಿಹಾರ ಕ್ರಮಕ್ಕೆ ಮುಂದಿನ ವಾರವೇ ಸಚಿವ ಅಂಗಾರರ ಜೊತೆ ಮುಖ್ಯಮಂತ್ರಿಯ ಭೇಟಿ ಮಾಡಲಾಗುವುದು ಎಂದು ರಾಜ್ಯ ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

 


ಸುಳ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸುಳ್ಯಕ್ಕೆ ಆಗಮಿಸಿದ ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸುಳ್ಯದಲ್ಲಿ 110ಕೆ.ವಿ. ಸಬ್‌ಸ್ಟೇಶನ್ ಅನುಷ್ಠಾನಗೊಳ್ಳಲು ನಾನೂ ಬದ್ಧ. ಇದು ಬಹಳ ವರ್ಷದಿಂದ ಎದುರಾಗಿರುವ ಸಮಸ್ಯೆ. ನಾನೇ ಇದರ ಫಾಲೋಅಪ್ ಮಾಡುತ್ತೇನೆ ಎಂದು ಇಂಧನ ಸಚಿವರು ಹೇಳಿದರು.
ನಾನು ಸಚಿವನಾದ ಬಳಿಕ ನೆನೆಗುದಿಗೆ ಬಿದ್ದ ಕಾಮಗಾರಿಗೆ ವೇಗ ನೀಡುವುದು ಮತ್ತು ಹೊಸ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವ ಕಾರ್ಯ ಯೋಜನೆ ಹಾಕಿಕೊಂಡಿದ್ದೇನೆ, ಬೆಳಕು ಯೋಜನೆಯಡಿ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವ ಯೋಜನೆ ಜಾರಿಗೆ ಬಂದಿದೆ. ಮೊದಲು ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯತ್‌ಗಳ ಎನ್.ಒ.ಸಿ. ಅಗತ್ಯವಿದ್ದು ಇನ್ನು ಮುಂದೆ ಅದರ ಅಗತ್ಯವಿರುವುದಿಲ್ಲ. ಅಲ್ಲದೇ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋದ 24 ಗಂಟೆಯೊಳಗೆ ಸರಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 160 ಟಿ.ಸಿ.ಬ್ಯಾಂಕ್ ಹಾಗೂ 162 ಟಿ.ಸಿ.ರಿಪೇರಿ ಸೆಂಟರ್ ಆರಂಭಿಸಲಾಗಿದೆ. ಟಿ.ಸಿ. ಸಂಪರ್ಕದಲ್ಲಿ ಯಾರಾದರೂ ಭ್ರಷ್ಟಾಚಾರ ನಡೆಸಿದರೆ ಅವರನ್ನು 24 ಗಂಟೆಯೊಳಗೆ ಅಮಾನತು ಮಾಡಲಾಗುವುದು ಎಂದು ಸಚಿವರು ಹೇಳಿದರು.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಮುಂದಿನ ವಾರ ಕರ್ನಾಟಕದ ನಿಯೋಗ ದೆಹಲಿಗೆ ತೆರಳುವುದಾಗಿ ಸಚಿವರು ಹೇಳಿದರು.
ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ನಾಯಕರಾದ ಮುಳಿಯ ಕೇಶವ ಭಟ್, ವೆಂಕಟ್ ವಳಲಂಬೆ, ಸುಭೋದ್ ಶೆಟ್ಟಿ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.