ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

 

ಭಾಷೆ ಉಳಿದರೆ ಸಂಸ್ಕ್ರತಿಯ ಉಳಿವು : ವಿ.ಸುನಿಲ್ ಕುಮಾರ್

ಆಧುನಿಕತೆಯ ಈ ದಿನದಲ್ಲಿ ನಮ್ಮ ಮನೆಯ ಭಾಷೆಗಳಾದ ತುಳು, ಕನ್ನಡವನ್ನು ಮಕ್ಕಳಿಗೆ ಕಲಿಸುವುದರ ಬದಲು ಅನ್ಯಭಾಷೆಯತ್ತ ನಾವು ವಾಲುತ್ತಿದ್ದೆವೆ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ಭಾಷೆ ಬೆಳೆದರೆ ಮಾತ್ರ ನಮ್ಮ ಸಂಸ್ಕ್ರತಿ ಉಳಿಯಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಇಂದು ಸುಳ್ಯದ ಅಮರಶ್ರೀಭಾಗ್ ನ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆದ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 6 ಮಂದಿ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಮೀನುಗಾರಿಕಾ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ನಮ್ಮ ಭಾಷೆ ಸಂಸ್ಕ್ರತಿ ಅದರ ಕಟ್ಟುಪಾಡುಗಳನ್ನು ನಾವು ಅಳವಡಿಸುವುದರ ಜತೆಗೆ ಮುಂದಿನ ಪೀಳಿಗೆಗೂ ಪಸರಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಭಾಷೆ ನಾಶವಾದರೆ ನಮ್ಮ ಬದುಕು ನಾಶವಾದಂತೆ ಎಂದು ಹೇಳಿದರು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ‌ವಹಿಸಿದ್ದರು.

ನ.ಪಂ.‌ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮುಖ್ಯ ಅತಿಥಿಗಳಾಗಿದ್ದರು.

ಪ್ರಶಸ್ತಿ ಪ್ರದಾನ :

2019-20 ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರಾದ ಎನ್.ಎಸ್. ದೇವಿಪ್ರಸಾದ್ ಸಂಪಾಜೆ (ಸಾಹಿತ್ಯ), ಶ್ರೀಮತಿ ಪಂಜಿಪಳ್ಳ ಇಂದ್ರಾಕ್ಷಿ ವೆಂಕಪ್ಪ (ಜಾನಪದ), ದಿ.ಮೋಹನ್ ಸೋನಾ (ಚಿತ್ರಕಲಾ) ಪರವಾಗಿ ಅವರ ಮನೆಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
2020-21 ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಕುಂಞಿಟ್ಟಿ ಶಿವರಾಮ ಗೌಡ (ಸಾಹಿತ್ಯ), ಡಾ.ಕೋರನ ಸರಸ್ವತಿ ಪ್ರಕಾಶ್ (ಸಂಶೋಧನೆ), ಪದ್ಮಯ್ಯ ಗೌಡ ಪರಿವಾರಕಾನ (ಪಾರಂಪರಿಕ ವೈದ್ಯ) ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರು ಚಾಮರಾಜ ಜೋಡಿ ರಸ್ತೆ ಸರಕಾರಿ ಬಾಲಕಿಯರ ಪದವಿ ಪೂರ್ವ ಉಪನ್ಯಾಸಕ ಪಟ್ಟಡ ಶಿವಕುಮಾರ್ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡಿದರು.

ಅರೆಭಾಷೆ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಕಾಡೆಮಿ ಸದಸ್ಯರಾದ ಜಾನಕಿ ಬೆಳ್ಯಪ್ಪ ಬೈತಡ್ಕ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಎ.ಪಿ. ಧನಂಜಯ ಅಗೋಳಿಕಜೆ, ಆನಂದ ದಂಬೆಕೋಡಿ, ಡಾ.ದಯಾನಂದ ಕೂಡಕಂಡಿ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ, ಡಾ.ಪುರುಷೋತ್ತಮ ಕೆ.ವಿ. ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ ಅಲಸಂಡೆಮಜಲು ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ಡಾ.ವಿಶ್ವನಾಥ್ ಬದಿಕಾನ ಸ್ವಾಗತಿಸಿದರು. ಎ.ಟಿ. ಕುಸುಮಾಧರ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.