ಬೊಳುಬೈಲು : ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ಹಾಗೂ ಕಾರ್ಯಾಗಾರ

Advt_Headding_Middle

 

ಪೀಸ್ ಸ್ಕೂಲ್ ಬೊಳುಬೈಲು ಹಾಗೂ ಅಗ್ನಿಶಾಮಕ ದಳ, ಸುಳ್ಯ, ಇವರ ವತಿಯಿಂದ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ಹಾಗೂ ಕಾರ್ಯಾಗಾರವು ಇಂದು ಪೀಸ್ ಸ್ಕೂಲ್ ಬೊಳುಬೈಲು ಇದರ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಎಂ ಬಾಬುರವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ಪೈಚಾರ್ ಹಾಗೂ ಗೀತಾ ಗೋಪಿನಾಥ್ ಉಪಸ್ಥಿತರಿದ್ದರು.


ಸಭೆಯ ಅಧ್ಯಕ್ಷತೆಯನ್ನು ಪೀಸ್ ಸ್ಕೂಲ್ ನ ಸಂಚಾಲಕ ರಾದ ಕೆ. ಅಬೂಬಕರ್ ರವರು ವಹಿಸಿದ್ದರು. ಸುಳ್ಯ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿಯಾದ ಯು.ರಾಜಗೋಪಾಲ್ ರವರು ಅಗ್ನಿ ಸುರಕ್ಷತಾ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು.


ಅಗ್ನಿಶಾಮಕ ದಳದ ಸಿಬ್ಬಂದಿಗಳು ಶಾಲೆಯ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ವಿವಿಧ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾತಕ್ಷಿಕತೆಯ ಮೂಲಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೀಸ್ ಸ್ಕೂಲಿನ ಟ್ರಸ್ಟಿಯಾದ ಸಂಶುದ್ದೀನ್, ಬೊಳುಬೈಲ್ ನ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.


ಆರ್. ಬಿ ಬಶೀರ್ ಪೈಚಾರ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯೋಪಾಧ್ಯಯರಾದ ಮುಹಮ್ಮದ್ ಸೈಫುಲ್ಲಾರವರು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.