Breaking News

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸೂರಿಲ್ಲದವರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

Advt_Headding_Middle

ಸುಳ್ಯ ಲಯನ್ಸ್ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಸಂದರ್ಭದಲ್ಲಿ ಹಸ್ತಾಂತರಗೊಳ್ಳಲಿರುವ ರೂ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಡುವ ಮನೆಗೆ ಗುದ್ದಲಿ ಪೂಜೆಯು ಜ.3 ರಂದು ನೆರವೇರಿತು.

ಮನೆಯಿಲ್ಲದ ಬಡ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಯೋಜನೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಕಜೆ ಜಯರಾಮ ಗೌಡ ರವರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು ಇದರ ಗುದ್ದಲಿಪೂಜೆಯನ್ನು ಲಯನ್ಸ್ ವಲಯಾಧ್ಯಕ್ಷ ಲಯನ್ ವೆಂಕಪ್ಪ ಗೌಡ ಕೇನಾಜೆ ಯವರು ಎಲಿಮಲೆಯ ಕಜೆಯಲ್ಲಿ ನೆರವೇರಿಸಿದರು. ಜಿಲ್ಲಾ ಲಯನ್ಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಲಯನ್ ಜಯರಾಮ್ ದೇರಪ್ಪಜ್ಜನಮನೆ ಯವರು ಮನೆಯ ಅಡಿಪಾಯದ ಕೆಲಸಕ್ಕೆ ಯಂತ್ರದ ಮೂಲಕ ಚಾಲನೆಯನ್ನು ನೀಡಿದರು. ವಲಯ ಸಲಹೆಗಾರ ಲಯನ್ ಗಂಗಾಧರ್ ರೈ, ಕಾರ್ಯದರ್ಶಿ ಲಯನ್ ರಮಿತಾ ಜಯರಾಮ್, ಸದಸ್ಯೆ ಸುಷ್ಮಾ ಆನಂದ್ ಹಾಗೂ ಫಲಾನುಭವಿಗಳ ಕುಟುಂಬಸ್ಥರು ಹಾಗೂ ಸ್ಥಳೀಯರು ಭಾಗವಹಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಆನಂದ ಪೂಜಾರಿ ಯವರು ಸ್ವಾಗತಿಸಿದರು. ಕಾರ್ಯದರ್ಶಿ ಲಯನ್ ರಮಿತಾ ಜಯರಾಮ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.