ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ನೂತನ ವರ್ತಕ ಸಮುದಾಯ ಭವನ ಉದ್ಘಾಟನೆ

Advt_Headding_Middle

 

ಸುಳ್ಯದ ಬೆಳವಣಿಗೆಯಲ್ಲಿ ವರ್ತಕರ ಕೊಡುಗೆ ದೊಡ್ಡದು : ಸಚಿವ ಎಸ್.ಅಂಗಾರ

ಸುಳ್ಯ ಪುರಸಭೆಯಾಗಿ ಅಭಿವೃದ್ಧಿ ಹೊಂದಲಿ : ಸಂಸದ ನಳಿನ್ ಕುಮಾರ್ ಕಟೀಲ್

ಬೆಳೆಯುತ್ತಿರುವ ಸುಳ್ಯದ ಬೆಳವಣಿಗೆಯಲ್ಲಿ ಇಲ್ಲಿನ ವರ್ತಕರ ಪಾಲು ದೊಡ್ಡದು. ಪ್ರತೀ ಕ್ಷೇತ್ರದಲ್ಲಿಯೂ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು. ಅದಕ್ಕಾಗಿ ಸಂಘಟಿತರಾಗಿ ಬೆಳೆಯಬೇಕು. ಅಂತಹ ಸಂಘಟನೆ ವರ್ತಕರಿಂದಲೂ ಆಗಿದ್ದು, ನಿಮ್ಮ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ನಿಮ್ಮ ಜೊತೆಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ.

 

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ನೂತನ ಕಟ್ಟಡ ವರ್ತಕರ ಸಮುದಾಯ ಭವನವನ್ನು ಇಂದು ಉದ್ಘಾಟಸಿ ಅವರು ಮಾತನಾಡಿದರು. ಸುಳ್ಯ ಅಭಿವೃದ್ಧಿ ಹೊಂದುತ್ತಿರುವ ಹಾಗೆ ಪೂರಕ ವ್ಯವಸ್ಥೆಗಳು ಬರಬೇಕು. ಅಂತಹ ಸಂದರ್ಭದಲ್ಲಿ ಜನರ ಪ್ರೋತ್ಸಾಹ ಹೆಚ್ಚು ಇರಬೇಕು ಎಂದು ಸಚಿವರು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ನಾಮಫಲಕ ಅನಾವರಣಗೊಳಿಸಿದರು. ಒಂದು ಕಾಲದಲ್ಲಿ ಹಿಂದುಳಿದ ಪ್ರದೇಶವಾಗಿದ್ದ ಸುಳ್ಯ ಈಗ ಮುಂದುವರೆದ ಕೆಲವೇ ಪ್ರದೇಶಗಳಲ್ಲಿ ಒಂದಾಗಿದೆ. ಇದರಲ್ಲಿ ವರ್ತಕರ ಪಾಲೂ ಕೂಡಾ ದೊಡ್ಡದಾಗಿದೆ ಎಂದು ಹೇಳಿದರು.

ಕೊರೋನಾ ಕಾರಣದಿಂದ ಎಲ್ಲಾ ದೇಶಗಳು ಕಂಗೆಟ್ಟಿದ್ದರೂ ಆರ್ಥಿಕ ಪುನಶ್ಚೇತನದಿಂದ ಎದ್ದು ನಿಂತ ದೇಶ ಭಾರತ. ಸರ್ಕಾರದ ನಿರ್ಧಾರಗಳು ಇದಕ್ಕೆ ಕಾರಣವಾಯಿತು. ವರ್ತಕರು ಬೆಂಬಲ ನೀಡಿದರು. ಆತ್ಮ ನಿರ್ಭರದಂತಹ ಯೋಜನೆಗಳು ವರ್ತಕರ ಸಮಸ್ಯೆಗಳಿಗೆ ಉತ್ತರವಾಯಿತು ಎಂದ ಸಂಸದರು ಸುಳ್ಯ ಪುರಸಭೆಯಾಗಿ ಮೇಲ್ದರ್ಜೆಗೇರಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಪದ್ಮಶ್ರೀ ಡಾ|ಗಿರೀಶ್ ಭಾರದ್ವಾಜ್, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಯಪ್ರಕಾಶ್ ಕುಂಚಡ್ಕ, ಚನಿಯ ಕಲ್ತಡ್ಕ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ, ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶೀಲಾ ಕುರುಂಜಿ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಮಾಧವ ಗೌಡ ಕಾಮಧೇನು ಅತಿಥಿಗಳಾಗಿ ಭಾಗವಹಿಸಿದ್ದರು. ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವರ್ತಕರ ಸಂಘದ ನಿರ್ದೇಶಕ ಗುರು ವಿಕ್ರಮ್ ಪ್ರಸಾದ್ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು. ಭವಾನಿ ಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.