ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ಸದ್ಯದಲ್ಲಿಯೇ ಸರ್ವೆ: ನಳಿನ್‌ಕುಮಾರ್ ಕಟೀಲ್

Advt_Headding_Middle
Advt_Headding_Middle

 

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕುರಿತು ಸದ್ಯದಲ್ಲಿಯೇ ಸಮೀಕ್ಷಾ ಕಾರ್ಯ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಮೈಸೂರು – ಮಡಿಕೇರಿ ತನಕ ಕಾಮಗಾರಿ ಆರಂಭವಾಗಿದ್ದು, ಮೂರನೇ ಹಂತದಲ್ಲಿ ಮಡಿಕೇರಿ ಯಿಂದ ಮಾಣಿ ವರೆಗೆ ಹೆದ್ದಾರಿ ಅಭಿವೃದ್ಧಿ ನಡೆಯಲಿದೆ ಎಂದು ಹೇಳಿದರು. ಈ ಹಿಂದೆ ಸುಳ್ಯದ ಬೈಪಾಸ್‌ನ ಸರ್ವೆ ಕಾರ್ಯ ನಡೆದಿತ್ತು. ಈಗ ಮೈಸೂರು – ಮಾಣಿ ರಸ್ತೆ ಅಭಿವೃದ್ಧಿ ಸಂದರ್ಭದಲ್ಲೇ
ಸುಳ್ಯದಲ್ಲಿ ಬೈಪಾಸ್ ನಿರ್ಮಾಣ ಮಾಡುವ ಬಗ್ಗೆಯೂ ಪ್ರಸ್ತಾಪ ಇದೆ. ಆ ಸರ್ವೆ ಕಾರ್ಯ ನಡೆಯಬೇಕಷ್ಟೆ ಎಂದು ಅವರು ಹೇಳಿದರು. ಬಿ.ಸಿ. ರೋಡ್- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಯತ್ತಿದೆ ಎಂದು ಅವರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.