ಜ.10 ರಂದು ಸುಳ್ಯದಲ್ಲಿ ಭ್ರಷ್ಟಾಚಾರ ವಿರೋಧಿ ದಿನ ಆಚರಣೆ
ತಾಲೂಕಿನಾದ್ಯಂತ ಸಂಚರಿಸಿದ ಜಾಗೃತಿ ರಥ
ಜ.10 ರಂದು ಸುದ್ದಿ ಸಮೂಹ ಸಂಸ್ಥೆಗಳ ನೇತೃತ್ವದಲ್ಲಿ ನಡೆಯಲಿರುವ ಭ್ರಷ್ಟಾಚಾರ ವಿರೋಧಿ ದಿನಾಚರಣೆ ಹಾಗೂ ಜ.6 ರಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸುಳ್ಯಕ್ಕೆ ಬಂದು ಶಿವಕೃಪಾ ಕಲಾ ಮಂದಿರದಲ್ಲಿ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಿತು.
ಇಂದು ಆಲೆಟ್ಟಿ, ಅಮರಮುಡ್ನೂರು, ಬಾಳಿಲ, ನಿಂತಿಕಲ್ಲು, ಪಂಜ, ಬಳ್ಪ, ಯೇನಕಲ್ಲು, ಗುತ್ತಿಗಾರಿನಲ್ಲಿ ಜಾಗೃತಿ ರಥ ಸಂಚರಿಸಿತು.