ಜಾಲ್ಸೂರು : ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಮಾಸಾಶನ ವಿತರಣೆ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಾಲ್ಸೂರು ಗ್ರಾಮದ ಕಲ್ಲಮರ ನಿವಾಸಿಗಳಾದ ಭಾಗೀರಥಿ ಅವರ ಮಗ ಕಾರ್ತಿಕ್ ಹಾಗೂ ಚಂದ್ರರವರ ತಾಯಿ ಬೊಳ್ಳೆ ಇವರಿಗೆ ಜ. 3ರಂದು ಮಾಸಾಶನ ವಿತರಣೆ ಮಾಡಲಾಯಿತು.

ಕಾರ್ತಿಕ್ ಎಂಬ ಮಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಹಾಗೂ ಬೊಳ್ಳೆ ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಪ್ರತಿ ತಿಂಗಳು ರೂ.1,000ದಂತೆ ಅನುದಾನ ಮಂಜೂರಾಗಿದೆ. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಯರಾಮ್ ರೈ ಜಾಲ್ಸೂರು .ಜಾಲ್ಸೂರು ವಲಯದ ವಲಯ ಅಧ್ಯಕ್ಷರಾದ ಮುರಳೀಧರನ್ ಕೆಮನಬಳ್ಳಿ, ಜಾಲ್ಸೂರು ಶ್ರೀ ಗುರು ರಾಘವೇಂದ್ರ ಭಜನಾಮಂದಿರದ ಅಧ್ಯಕ್ಷ ಬಾಬು ಪಾಟಾಳಿ, ವಲಯ ಮೇಲ್ವಿಚಾರಕರಾದ ಸುಜಾತ, ಸೇವಾ ಪ್ರತಿನಿಧಿ ವೀಣಾ ಹಾಗೂ ಸದಸ್ಯರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಂಡೆಕೋಲು ನಿವಾಸಿ ಲಕ್ಷ್ಮಿಯವರಿಗೆ ಮಾಸಾಶನ ವಿತರಣೆ ಮಾಡಲಾಯಿತು. ಇವರು. ಕಿಡ್ನಿ ತೊಂದರೆ ಯಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಸುಳ್ಯ ವಲಯ ಅಧ್ಯಕ್ಷ ಸುರೇಶ ಕಣೆಮರಡ್ಕ, ನಗದು ಸಹಾಯಕಿ ದಿವ್ಯ, ಸುಜಾತಾ, ಜಾನಕಿ, ಪುಷ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.