ಸಾಮಾಜಿಕ ತಾಣಗಳಲ್ಲಿ ತೇಜೋವಧೆ : ಕಾನೂನಿನ ಮೊರೆ ಹೋಗಲು ಜಿ.ಕೆ.ಹಮೀದ್ ನಿರ್ಧಾರ

Advt_Headding_Middle
Advt_Headding_Middle

 

ಸತ್ಯಪ್ರಮಾಣಕ್ಕೆ ಬರಲು ಆಹ್ವಾನ
ಸಂಪಾಜೆ ಗ್ರಾಮದ ಗೂನಡ್ಕದಲ್ಲಿರುವ ಮಾರುತಿ ಸ್ಕೂಲ್ ನಲ್ಲಿ ನಡೆದ ಘಟನೆ ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತನ್ನ ತೇಜೋವಧೆ ಮಾಡುತ್ತಿರುವುದಾಗಿ ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದು , ಆ ಬಗ್ಗೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಅದಲ್ಲದೆ ಅಪಪ್ರಚಾರ ಮಾಡುವವರು ಸತ್ಯಪ್ರಮಾಣಕ್ಕೆ ಬರಲಿ ಎಂದು ಪಂಥಾಹ್ವಾನ ನೀಡಿದ್ದಾರೆ.

” ನಾನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ, ಸದಸ್ಯನಾಗಿ ಕಳೆದ 22 ವರ್ಷಗಳಿಂದ ನನ್ನ ಕ್ಷೇತ್ರದ ಜನರ ಆಶೀರ್ವಾದದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸಕ್ತ ವರ್ಷ ನಮ್ಮ ಪಂಚಾಯತು ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ನಮ್ಮ ಗ್ರಾಮದ ಮಾರುತಿ ಸ್ಕೂಲ್ ನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದ ಘಟನೆಯನ್ನು ಮುಂದಿಟ್ಟು. ಸಾಮಾಜಿಕ ಜಾಲತಾಣ ಗಳಲ್ಲಿ ನನ್ನ ಬಗ್ಗೆ ತಪ್ಪು ಸಂದೇಶ ಹರಿದಾಡುತ್ತಿರುವ ವಿಚಾರ ನನ್ನ ಮನಸ್ಸಿಗೆ ತುಂಬಾ ನೋವನ್ನು ತರಿಸಿದೆ. ಮಾರುತಿ ಶಾಲೆಯಲ್ಲಿ ಘಟನೆ ನಡೆದ ಮಾರನೇ ದಿನ ಮಧ್ಯಾಹ್ನ ನನ್ನ ಆತ್ಮೀಯ ಮಿತ್ರ ನಮ್ಮ ಊರಿನ ಡಾ. ಲೀಲಾಧರ್’ ಫೋನ್ ಕರೆ ಮಾಡಿ ವಿಚಾರ ತಿಳಿಸಿದರು. ತದ ನಂತರ ನನಗೆ ನಮ್ಮ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಅವರು ತಿಳಿಸಿದ ಮೇರೆಗೆ ನಾನು ಡಾ.ಲೀಲಾಧರ್ ಜೊತೆಗೆ ಮಡಿಕೇರಿ ಆಸ್ಪತ್ರೆಗೆ ತೆರಳಿ ಮಗುವಿನ ಕ್ಷೇಮ ಸಮಾಚಾರ ತಿಳಿದುಕೊಂಡೆ. ಲೀಲಾಧರ್ ಹಾಗೂ ನಾನು ಮಗುವಿನ ಕುಟುಂಬ ವರ್ಗದ ಜೊತೆಗೆ ಮಾತನಾಡಿ ” ನೀವು ಯಾವ ನಿರ್ಧಾರ ಕೈಗೊಂಡರೂ ನಾವು ನಿಮ್ಮ ಪರವಾಗಿದ್ದೇವೆ ” ಎಂದು ತಿಳಿಸಿದಾಗ ” ನಾವು ಮಡಿಕೇರಿಯಲ್ಲಿ ನಮ್ಮ ಮಗನನ್ನು ಸೇರಿಸುತ್ತೇವೆ. ನಮಗೆ ಟಿ.ಸಿ. ತೆಗೆಸಿ ಕೊಡಿ ” ಎಂದು ಅವರ ಬೇಡಿಕೆಗಳನ್ನು ಸಲ್ಲಿಸಿದರು. ನಾವು ಅದಕ್ಕೆ ಒಪ್ಪಿಗೆ ಸೂಚಿಸಿ ಸೌಹಾರ್ದ ಇತ್ಯರ್ಥ ಮಾಡಿ ಬಂದಾಗ ನಾನಾ ರೀತಿಯ ಉಹಾಪೋಹ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡಿತು. ನಾನು ಮಾರುತಿ ಸ್ಕೂಲ್ ಪರವಾಗಿ ಲಾಬಿ ನಡೆಸಿಲ್ಲ. ನನಗೆ ಅದರ ಅನಿವಾರ್ಯತೆ ಇಲ್ಲ. ಗ್ರಾಮದ ಸೌಹಾರ್ದತೆ, ಸಾಮರಸ್ಯವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಮುದಾಯದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಯಾರಿಗಾದರೂ ನನ್ನ ಬಗ್ಗೆ ಸಂಶಯ ಇದ್ದರೆ ನಾನು ಸತ್ಯ ಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಸಾಮಾಜನಿಕ ಜಾಲತಾಣಗಳಲ್ಲಿ ಅಪಪ್ರಚಾರ, ತೇಜೋವಧೆ ಮಾಡುವವರು ಸತ್ಯ ಸ್ಥಳಕ್ಕೆ ಬರಲಿ. ಇದಲ್ಲದೆ ನ್ಯಾಯಕ್ಕಾಗಿ ಕಾನೂನಿನ ಮೊರೆ ಹೋಗಲು ತೀರ್ಮಾನಿಸಿದ್ದೇನೆ ” ಎಂದು ಜಿ. ಕೆ. ಹಮೀದ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.