Breaking News

ಆಲೆಟ್ಟಿ ಸದಾಶಿವ ದೇವರ ಜಾತ್ರೋತ್ಸವದ ಪೂರ್ವಭಾವಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವವು ಫೆ. 13 ರಿಂದ 17 ರ ತನಕ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು ಇದರ ಪೂರ್ವಭಾವಿ ಸಭೆಯು ಜ. 4 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು.

ಮುಂದಿನ ತಿಂಗಳು‌ ನಡೆಯಲಿರುವ ‌ಜಾತ್ರೋತ್ಸವದ ಕಾರ್ಯಕ್ರಮವನ್ನು‌ ನಡೆಸುವ ಕುರಿತು ಸಮಾಲೋಚನೆ ನಡೆಸಲಾಯಿತು. ದೇವಸ್ಥಾನದ ಸುತ್ತಲಿನ ಪ್ರದೇಶವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲಾಯಿತು.ಆಮಂತ್ರಣ ಪತ್ರಿಕೆ ಮುದ್ರಿಸಿ ಆಯಾಯ ಪ್ರದೇಶಗಳ ಸಮಿತಿ ಮಾಜಿ ಸದಸ್ಯರ ಮುಖಾಂತರ ಬಟವಾಡೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.


ದೇವಸ್ಥಾನದ ಆಡಳಿತಾಧಿಕಾರಿ ಗ್ರಾಮ‌‌ ಲೆಕ್ಕಾಧಿಕಾರಿ ಶರತ್ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎ ರಾಮಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ,ವ್ಯ.ಸ. ಮಾಜಿ ಅಧ್ಯಕ್ಷ ಪ್ರಸನ್ನ ಕೆ. ಸಿ ಬಡ್ಡಡ್ಕ, ಮಾಜಿ ಸದಸ್ಯ ಚಂದ್ರಕಾಂತ ನಾರ್ಕೋಡು, ಗುತ್ತಿಗೆದಾರ ತೀರ್ಥಕುಮಾರ ಕುಂಚಡ್ಕ, ದೇವಸ್ಥಾನದ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಭಜನಾ ಸಂಘದ ಅಧ್ಯಕ್ಷ ಅಚ್ಯುತ ಮಣಿಯಾಣಿ ಆಲೆಟ್ಟಿ, ಸದಸ್ಯರಾದ ಹರಿಪ್ರಸಾದ್ ಗಬಲ್ಕಜೆ, ಲಕ್ಷ್ಮಣಗೌಡ ಪರಿವಾರ,ಹರಿಪ್ರಸಾದ್‌‌ ಕಾಪುಮಲೆ, ಚಿದಾನಂದಗೌಡ ನೂಜಿನ ಮೂಲೆ, ಶ್ರೀನಾಥ್ ಆಲೆಟ್ಟಿ ನವೀನ್ ಕುಮಾರ್ ಆಲೆಟ್ಟಿ, ಶ್ರೀಮತಿ ನಳಿನಿ ನಾರಾಯಣ ರೈ ಆಲೆಟ್ಟಿ, ರೂಪಾನಂದ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.