Breaking News

ಲಾಕ್‌ಡೌನ್ ವೀಕೆಂಡ್ ಕರ್ಫ್ಯೂ ಸರಕಾರದ ನಿಷ್ಕ್ರಿಯತೆಯ ಪ್ರತೀಕ : ಪಿ.ಎಸ್.ಗಂಗಾಧರ್

Advt_Headding_Middle

 

ಕೋವಿಡ್‌ಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಜನರ ಇಮ್ಯೂನಿಟಿ ಪವರ್‌ಗಾಗಿ ವ್ಯಾಕ್ಸಿನ್ ಪಡೆಯಲಾಗಿದೆ. ಮತ್ತೆ ಯಾಕೆ ಲಾಕ್‌ಡೌನ್, ವೀಕೆಂಡ್ ಕರ್ಫ್ಯೂ? ಜನಸಾಮಾನ್ಯರು ಒಂದು ವಾರ ಕೆಲಸ ಮಾಡಿ ವಾರಾಂತ್ಯದಲ್ಲಿ ತನ್ನ ದೈನಂದಿನ ವ್ಯವಹಾರಗಳಿಗೆ ಬೇಕಾಗುವ ದಿನಸಿ, ಇನ್ನಿತರ ಪರಿಕರಗಳನ್ನು ಪಡೆಯಲು ವಾರಾಂತ್ಯವನ್ನೆ ಅವಂಬಿಸಿರುತ್ತಾರೆ. ಆದರೆ ವಾರಾಂತ್ಯ ಕರ್ಫ್ಯೂಗೆ ಹೆದರಿದರೆ ಕೂಲಿ ಕಾರ್ಮಿಕರಿಗೆ, ವಾರಾಂತ್ಯ ಸಂಬಳ ಪಡೆಯುವ ನೌಕರರಿಗೆ ತುಂಬಾ ತೊಂದರೆಯಾಗುತ್ತದೆ.

ಆದ್ದರಿಂದ ವಾರಾಂತ್ಯ ಕರ್ಫ್ಯೂ ರದ್ದು ಪಡಿಸಬೇಕು. ಅಲ್ಲದೆ ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದು ಖಂಡನೀಯ. ಸುಳ್ಯದಲ್ಲಿ ಚೆನ್ನಕೇಶವ ದೇವರ ಜಾತ್ರೆ ಆರಂಭವಾಗಿದೆ. ಕೆಲವೇ ದಿನಗಳ ಹಿಂದೆ ಬ್ರಹ್ಮಕಲಶೋತ್ಸವ ನಡೆದು ಯಾವುದೇ ತೊಂದರೆಗಳಿಲ್ಲದೆ ಸುಳ್ಯದ ಜನ ಕ್ಷೇಮವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಾರ್ಷಿಕ ಉತ್ಸವಗಳಿಗೆ ನಿರ್ಬಂಧ ಹೇರುವುದನ್ನು ಖಂಡಿಸಿ ಕ್ಷೇತ್ರದ ಶಾಸಕರು, ಸಚಿವರಾಗಿರುವ ಎಸ್.ಅಂಗಾರರವರು ಕೂಡಲೇ ಮಧ್ಯ ಪ್ರವೇಶಿಸಿ ಜಾತ್ರೋತ್ಸವ ಸಾಂಗವಾಗಿ ನಡೆಯುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.