Breaking News

ಮುರುಳ್ಯ ಗ್ರಾ.ಪಂ. ಗ್ರಾಮಸಭೆ

Advt_Headding_Middle

ಮುರುಳ್ಯ ಗ್ರಾ.ಪಂ.ನ 2021-22 ನೇ ಸಾಲಿನ ಪ್ರಥಮ ಗ್ರಾಮ‌ ಸಭೆಯು ಜ. 5ರಂದು ಮುರುಳ್ಯ ಅಲೆಕ್ಕಾಡಿ ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ ಶಾಂತಿನಗರರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾಮಾಜಿಕ ಅರಣ್ಯ ಇಲಾಖೆ ವಲಯರಣ್ಯಾಧಿಕಾರಿ ಶ್ರೀಮತಿ ಶೈಲಜಾ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಬಾಮೂಲೆ, ಸದಸ್ಯರುಗಳಾದ ಕರುಣಾಕರ ಗೌಡ ಹುದೇರಿ, ಮೋನಪ್ಪ ಗೌಡ ಅಲೇಕಿ, ಸುಂದರ ಗೌಡ ಶೇರ, ಪಾಪುತ್ತಡಿ, ಶ್ರೀಮತಿ ಲೀಲಾವತಿ ಗೋಳ್ತಿಲ, ಶ್ರೀಮತಿ ಪುಷ್ಪಾವತಿ ಡಿ. ಕುಕ್ಕಟೆ, ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ ವರದಿ ವಾಚಿಸಿದರು. ಇಲಾಖಾಧಿಕಾರಿಗಳಾದ ಅರಣ್ಯ ಇಲಾಖೆಯ ಭರಮಪ್ಪ, ತಾ.ಪಂ.ನಿಂದ ನಮಿತಾ ಸಿ, ಗ್ರಾಮಕರಣಿಕ ದುರುಗಪ್ಪ, ತೋಟಗಾರಿಕಾ ಇಲಾಖೆಯ ಮಧುಶ್ರೀ ಎ, ಮೆಸ್ಕಾಂನ ಹರಿಕೃಷ್ಣ ಕೆ.ಜಿ, ಎಣ್ಮೂರು ವಲಯ ಸಿ.ಆರ್.ಪಿ. ಜಯಂತ್ ಕೆ, ಆರೋಗ್ಯ ಇಲಾಖೆಯ ಲಕ್ಷ್ಮೀ ಪಾತ್ರೋಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸುರಕ್ಷಾಧಿಕಾರಿ, ಬಿ.ಟಿ. ಪೂವಮ್ಮ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ ಸಮುದಾಯ ಆರೋಗ್ಯ ಮತ್ತು ಕ್ಷೇಮಾಧಿಕಾರಿ ಕು. ಲಕ್ಷ್ಮೀ, ಆಶಾ ಕಾರ್ಯಕರ್ತೆಯರಾದ ರೇವತಿ ಪಿ. ಮುರುಳ್ಯ, ಶ್ರೀಮತಿ ಹೇಮಾವತಿ ಕೆ, ಉಷಾ ನಂದ್ಕೂರು, ಶ್ರೀಮತಿ ಮೀರಾ ಬಿ, ಸಾಮಾಜಿಕ ಅರಣ್ಯ ಸಮಿತಿಯ ಆನಂದ, ಮೋಹಿತ್ ಭಾಗವಹಿಸಿದ್ದರು. ಗ್ರಾ.ಪಂ. ಸಿಬ್ಬಂದಿಗಳು ಸಹಕಾರ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.