ಬೆಳ್ಳಾರೆ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಬಿ.ವಿ.ಸೂರ್ಯನಾರಾಯಣ

Advt_Headding_Middle
Advt_Headding_Middle

ಬೆಳ್ಳಾರೆ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಬಿ.ವಿ.ಸೂರ್ಯನಾರಾಯಣ ರವರು ಇಂದು ಅಧಿಕಾರ ಸ್ವೀಕರಿಸಿದರು.
ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಬೆಳ್ಳಾರೆಗೆ ಬಂದಿದ್ದಾರೆ. ಹಿಂದೆ ಅವರು ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 20 ವರ್ಷ ಉಪನ್ಯಾಸಕರಾಗಿ, ಕೆಯ್ಯೂರು ಮತ್ತು ಸರ್ವೆ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಅಂಕಣಗಾರರಾಗಿರುವ ಅವರು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ತಿಂಗಳಾಡಿಯ ಎಲಿಯಾದಲ್ಲಿ ನೆಲೆಸಿರುವ ಇವರ ಪತ್ನಿ ಶ್ರೀಮತಿ ವಂದನಾ ಗೃಹಿಣಿಯಾಗಿದ್ದು,ಪುತ್ರ ಸ್ವೀಕೃತ್ ಅಮೇರಿಕಾದಲ್ಲಿ ಇಂಜಿನಿಯರ್, ಇನ್ನೋರ್ವ ಪುತ್ರ ಸಂಪ್ರೀತ್ ಚಾರ್ಟರ್ ಅಕೌಂಟೆಂಟ್ ಆಗಿದ್ದಾರೆ.
ಸೂರ್ಯನಾರಾಯಣರವರು ಇಂದು ಪ್ರಭಾರ ಪ್ರಾಂಶುಪಾಲರಾದ ಹಸೀನ ಬಾನು ರವರಿಂದ ಅಧಿಕಾರ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.