Breaking News

ಕಣೆಮರಡ್ಕದಲ್ಲಿ ಅಯ್ಯಪ್ಪ ಸ್ವಾಮಿ ಮಂದಿರ ಪುನಃ ಪ್ರತಿಷ್ಠಾ ಮಹೋತ್ಸವ : ಧಾರ್ಮಿಕ ಸಭೆ

Advt_Headding_Middle

 

 

ಮಂಡೆಕೋಲಿನ ಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಕಣೆಮರಡ್ಕದಲ್ಲಿ ನಿರ್ಮಾಣವಾಗಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ದರ್ಪಣಾ ಬಿಂಬ ಪುನಃ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆ ಜ.5 ರಂದು ನಡೆಯಿತು.

ಮೇನಾಲ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿ ಆಶೀರ್ವಚನ ನೀಡಿದರು. “ದೇವರ ಭಕ್ತಿಗೆ ದೇಹ ಶುದ್ದಿಗಿಂತ ಮನಸ್ಸುದ್ದಿ ಮುಖ್ಯ. ಮನಃಪೂರ್ವಕವಾಗಿ ದೇವರನ್ನು ಪೂಜಿಸಿದರೆ ಆ ಭಕ್ತನ ಕೋರಿಕೆಯನ್ನು ದೇವರು ಈಡೇರಿಸುತ್ತಾರೆ” ಎಂದು ಸ್ವಾಮೀಜಿ ಹೇಳಿದರು.
ನಾರಾಯಣ ಗುರುಸ್ವಾಮಿ ಕಣೆಮರಡ್ಕ, ಅಡ್ಪಂಗಾಯ ಅಯ್ಯಪ್ಪ ಮಂದಿರದ ಶಿವಪ್ರಕಾಶ್ ಅಡ್ಪಂಗಾಯ, ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಉದ್ಯಮಿ ಪಿ.ಬಿ. ಸುಧಾಕರ ರೈ, ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ಮುಖ್ಯ ಅತಿಥಿಗಳಾಗಿದ್ದರು.

ಶಬರಿಗಿರಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕ ಮಾತನಾಡಿದರು. ಪುನಃ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿದರು. ಶ್ರೀಕಾಂತ್ ಮಾವಂಜಿ ವಂದಿಸಿದರು.

ಗುರುವಂದನೆ : ಮಂದಿರ ಸ್ಥಾಪನೆ ಮಾಡಿದ ನಾರಾಯಣ ಗುರುಸ್ವಾಮಿ, ಶಿವಪ್ರಕಾಶ್ ಅಡ್ಪಂಗಾಯ, ರಾಮಚಂದ್ರ ಗುರುಸ್ವಾಮಿ, ಸುಂದರ ಗೌಡ ಕೇನ್ಯ, ಬಾಬಣ್ಣ ರೈ ಪೇರಾಲುಗುತ್ತು, ಮೋನಪ್ಪ ನಾಯ್ಕ ಬೇಂಗತ್ತಮಲೆ, ಶಿವಣ್ಣ ಗೌಡ ಮಿತ್ತಿಲ, ಗೋಪಾಲಕೃಷ್ಣ ಪೇರಾಲು ರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.