ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವ ಬಗ್ಗೆ ಸಭೆ

Advt_Headding_Middle
Advt_Headding_Middle

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಜ.2 ರಿಂದ ಪ್ರಾರಂಭಗೊಂಡಿದ್ದು ಇಂದು ಸಂಜೆ ಇಲಾಖಾಧಿಕಾರಿಗಳ ಮತ್ತು ಭಕ್ತಾದಿಗಳ ಸಭೆಯು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಚೆನ್ನಕೇಶವ ದೇವರ ಜಾತ್ರೋತ್ಸವ ಪ್ರಾರಂಭಗೊಂಡಿದೆ. ಈಗ ಕೋವಿಡ್ ಏರಿಕೆಯಿಂದಾಗಿ ಸರಕಾರದ ಮಾರ್ಗಸೂಚಿಗಳು ಬಂದಿದೆ. ಸರಕಾರ ಕೊರೊನಾ ವಿಕೆಂಡ್ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಜಾತ್ರೋತ್ಸವ ನಡೆಸುವ ಬಗ್ಗೆ ಇಲಾಖಾಧಿಕಾರಿಗಳು,ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ತಮ್ಮ ಅಭಿಪ್ರಾಯವನ್ನು ನೀಡಬೇಕೆಂದು ಹೇಳಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಮಾತನಾಡಿ ದೇವಸ್ಥಾನದ ಒಳಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಕಡಿಮೆ ಜನ ಇದ್ದು ಮಾಡುವ ಹಾಗೆ ಮತ್ತು ಹೊರಗಿನ ಧಾರ್ಮಿಕ ಕಾರ್ಯಕ್ರಮವನ್ನು ಕೂಡ ಕಡಿಮೆ ಜನ ಸೇರಿಕೊಂಡು ಮಾಡುವ ಬಗ್ಗೆ ಹೇಳಿದರು.
ಎಲ್ಲರೂ ತಮ್ಮ ಸಹಕಾರವನ್ನು ನೀಡಬೇಕೆಂದು ಅವರು ಹೇಳಿದರು.
ಜಾತ್ರೆ ಸಂತೆ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ನಿರ್ದೇಶನ ಮಾರ್ಗಸೂಚಿಯನ್ನು ನೋಡಿಕೊಂಡು ಮಾಡುವುದಾಗಿ ಅವರು ತಿಳಿಸಿದರು.
ರಥೋತ್ಸವವನ್ನು ಕೂಡ ಸೋಮವಾರ ರಾತ್ರಿ ಸ್ವಲ್ಪ ಬೇಗ ಮಾಡುವ ಹಾಗೆ ಅವರು ಹೇಳಿದರು.

ಎಸ್.ಐ.ದಿಲೀಪ್ ರವರು ಮಾತನಾಡಿ ಕೊರೊನಾ ಮಾರ್ಗಸೂಚಿಯನ್ನು ಅನುಸರಿಸಿಕೊಂಡು ಕಾರ್ಯಕ್ರಮಗಳನ್ನು ಮಾಡುವಂತೆ ಮತ್ತು ಸಂತೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶವನ್ನು ನೋಡಿಕೊಂಡು ಮಾಡುವುದಾಗಿ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ರವರು ಜಾತ್ರಾ ದಿನ ಆರೋಗ್ಯ ಇಲಾಖೆಯಿಂದ ಸ್ಯಾನಿಟೈಸೇಶನ್ ವ್ಯವಸ್ಥೆ ಮತ್ತು ಇಲಾಖೆಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.


ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜೀರ್ಣೋದ್ಧಾರ ಸಮಿತಿ ಸದಸ್ಯ ಎನ್.ಜಯಪ್ರಕಾಶ ರೈ, ಎಂ.ಮೀನಾಕ್ಷಿ ಗೌಡರವರು ಉಪಸ್ಥಿತರಿದ್ದರು.
ಸಭೆಯಲ್ಲಿದ್ದ ಪಿ.ಎಸ್.ಗಂಗಾಧರ್, ಎಂ.ವೆಂಕಪ್ಪ ಗೌಡ, ದಾಮೋದರ ಮಂಚಿ,ಗೋಕುಲದಾಸ್,ಸುಂದರರಾವ್,ಎಂ.ಎನ್.ಶ್ರೀಕೃಷ್ಣ ಭಟ್ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.