Breaking News

ಜೇಸಿಐ ಪಂಜ ಪಂಚಶ್ರೀ : ಪದಗ್ರಹಣ ಸಮಾರಂಭ

Advt_Headding_Middle

 

ನೂತನ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕಾರ

ಜೇಸಿಐ ಪಂಜ ಪಂಚಶ್ರೀ ಇದರ 25 ನೇ ವರುಷದ ಅಧ್ಯಕ್ಷರಾಗಿ ಆಯ್ಕೆಯಾದ
ಶಿವಪ್ರಸಾದ್ ಹಾಲೆಮಜಲು ಮತ್ತು ಘಟಕಾಡಳಿತ ಮಂಡಳಿಗೆ ಪದಗ್ರಹಣ ಸಮಾರಂಭ ಜ.5ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರುಗಿತು. ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಗಣೇಶ್ ಭೀಮಗುಳಿ ವಹಿಸಿದ್ದರು. ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಗುತ್ತಿಗಾರು ರಬ್ಬರ್ ಬೆಳಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ
“ಜೇಸಿಐ ವ್ಯಕ್ತಿತ್ವ ವಿಕಾಸನ ಗೊಳಿಸುವ ಮೂಲಕ ಉತ್ತಮ ಸಮಾಜ ನಿರ್ಮಿಸುವ ಸಂಸ್ಥೆ. ಪಂಜ ಪಂಚಶ್ರೀ ಜೇಸಿಐ ಕ್ರಿಯಾಶೀಲ ಘಟಕವಾಗಿ ಬೆಳೆದು ಈ ವರ್ಷ 25ನೇ ವರ್ಷವನ್ನು ಆಚರಿಸುತ್ತಿದೆ.” ಎಂದು ಅವರು ಹೇಳಿದರು.

“ಸುದ್ದಿ ಬಿಡುಗಡೆ ಪತ್ರಿಕೆ ಯವರು ಭ್ರಷ್ಟಾಚಾರದ ವಿರುದ್ಧ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಇಂದು ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಎಲ್ಲಾ ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.ಯುವ ಜನತೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ”. ಎಂದು ಹೇಳಿದರು
.ಪದಗ್ರಹಣ ಅಧಿಕಾರಿಯಾಗಿ ವಲಯ 15 ರ ವಲಯಾಧ್ಯಕ್ಷ ರಾಮನ್ ಉದಯ ಕ್ರಾಸ್ಟಾ , ಅತಿಥಿ ವಲಯ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ ಶುಭಹಾರೈಸಿದರು. ಘಟಕದ ನಿಕಟಪೂರ್ವಾಧ್ಯಕ್ಷ ನಾಗಮಣಿ ಕೆದಿಲ, ಕಾರ್ಯದರ್ಶಿ ಲೋಕೇಶ್ ಆಕ್ರಿಕಟ್ಟೆ, ಸ್ಥಾಪಕಾಧ್ಯಕ್ಷ
ದೇವಿಪ್ರಸಾದ್ ಜಾಕೆ, ನೂತನ ಕಾರ್ಯದರ್ಶಿ ಕೌಶಿಕ್ ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನಪರ ಜನವರಿ ಬ್ಯಾನರ್ ಮತ್ತು ಆಮಂತ್ರಣ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು. ಇದೇ ವೇಳೆ ನೂತನವಾಗಿ ಸೇರ್ಪಡೆಗೊಂಡ 18 ಸದಸ್ಯರಿಗೆ ಪ್ರಮಾಣ ವಚನ ನಡೆಯಿತು ಕಾರ್ಯಕ್ರಮದಲ್ಲಿ ಗಣೇಶ್ ಭೀಮಗುಳಿ ಸ್ವಾಗತಿಸಿದರು. ಕೌಶಿಕ್ ಕುಳ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.