ಪೆರಾಜೆ : ತೆಂಗಿನ ಮರದಿಂದ ಬಿದ್ದು ಮೃತ್ಯು

Advt_Headding_Middle
Advt_Headding_Middle

 

 

ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಜ. 5 ರಂದು ನಡೆದಿದೆ.

ಪೆರಾಜೆ ಬಂಗಾರಕೋಡಿಯ ಹರೀಶ್ ಎಂಬವರು ಮೃತಪಟ್ಟ ವ್ಯಕ್ತಿ.
ಹರೀಶರು ತಮ್ಮ ಹಳೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಜಾಗ ಸಮತಟ್ಟು ಮಾಡಲು ಜೆಸಿಬಿಯನ್ನು ದ. 29ರಂದು ಕರೆಸಿದ್ದರು . ಜೆಸಿಬಿಯವರು ಮನೆಕೆಡವಿ ಸಮತಟ್ಟು ಮಾಡುತ್ತಿದ್ದಾಗ , ಅವರಿಗೆ ಕುಡಿಯಲೆಂದು ಬೊಂಡ ತೆಗೆಯಲು ಹರೀಶರು ತೆಂಗಿನ ಮರ ಏರಿದ್ದರು. ಈ ಸಂದರ್ಭದಲ್ಲಿ ತೆಂಗಿನ ಮರದಿಂದ ಆಯತಪ್ಪಿ ಹರೀಶರು ಬಿದ್ದು ಗಂಭೀರ ಗಾಯಗೊಂಡರು. ಕೂಡಲೇ ಅಲ್ಲಿದ್ದವರು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತಂದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಕುತ್ತಿಗೆ ಹಿಂಬಾಗ, ಬೆನ್ನು , ಸೊಂಟದ ಮೂಳೆ ಮುರಿತಕ್ಕೊಳಗಾದ ಹರೀಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಜ. 5 ರಂದು ಮೃತಪಟ್ಟರು .
ಮೃತರು ಪತ್ನಿ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ವಿದ್ಯಾ ಬಂಗಾರಕೋಡಿ, ಇಬ್ಬರು ಪುತ್ರಿಯರು , ಓರ್ವ ಪುತ್ರನನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.