Breaking News

ವೈಯಕ್ತಿಕ ಬದಲಾವಣೆಯಿಂದ ಸಮಾಜದಲ್ಲಿ ಬದಲಾವಣೆ ತರೋಣ

Advt_Headding_Middle

 

ಭ್ರಷ್ಟರಿಗೆ ಗೌರವ ಕೊಡಬೇಡಿ; ಪ್ರಾಮಾಣಿಕರಿಗೆ ಸಲಾಂ ಹೊಡೆಯಿರಿ

ಲಂಚ, ಭ್ರಷ್ಟಾಚಾರ ವಿರೋಧಿ ಸಂವಾದದಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಆಶಯ

ದುರಾಸೆ ಮನುಷ್ಯನನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಇಂದು ನಾವು ನೋಡುತ್ತಿದ್ದೇವೆ. ಭ್ರಷ್ಟಾಚಾರದ ವಿಚಾರದಲ್ಲಿ ನಾವು ನಮ್ಮಲ್ಲಿ ವೈಯಕ್ತಿಕ ಬದಲಾವಣೆಯನ್ನು ತಂದು ಆ ಮೂಲಕ ಸಮಾಜದಲ್ಲಿ ಬದಲಾವಣೆ ತರೋಣ. ತೃಪ್ತಿ ಮತ್ತು ಮಾನವೀಯತೆಯ ಗುಣ ಎಲ್ಲರಲ್ಲಿಯೂ ಇರಬೇಕು ಎಂದು ಮಾಜಿ ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಇಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಸುದ್ದಿ ಜನಹಿತ ಆಂದೋಲನದ ಭಾಗವಾಗಿ ನಡೆದ ಲಂಚ, ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಂವಾದ ಹಾಗೂ ಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನಮ್ಮಲ್ಲಿ ಏನು ಇದೆಯೋ ಅದರಲ್ಲಿ ತೃಪ್ತಿ ದಾಯಕ ಜೀವನ ನಡೆಸಬೇಕು. ಹೆಚ್ಚು ಬೇಕೆಂದು ದುರಾಸೆಗೆ ಬಿದ್ದಾಗ ಭ್ರಷ್ಟಾಚಾರಕ್ಕೆ ಬೀಳುತ್ತೇವೆ. ಇದು ಇಂದು ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುವುದನ್ನು ನೀವು ನಾವೆಲ್ಲರೂ ನೋಡುತ್ತಿದ್ದೇವೆ. ಇದನ್ನು ಬದಲಾಯಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು. ಭ್ರಷ್ಟಾಚಾರದ ಕುರಿತು ನಮ್ಮಲ್ಲಿ ವೈಯಕ್ತಿಕ ಬದಲಾವಣೆ ತರೋಣ. ಆ ಮೂಲಕ ಸಮಾಜ ಬದಲಾಯಿಸೋಣ. ಇದು ಶಾಂತಿಯುತವಾಗಿ ನಡೆಯಬೇಕೆ ಹೊರತು ಕ್ರಾಂತಿಯ ಮೂಲಕ ನಡೆಯಬಾರದು” ಎಂದು ಹೇಳಿದರು.

ಸಮಾಜದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲ ಕಡೆಯಲ್ಲಿಯೂ ಭ್ರಷ್ಟಾಚಾರ ಇದೆ. ಯಾಕೆಂದರೆ ಎಲ್ಲರೂ ಇದೇ ಸಮಾಜದಿಂದ ಬಂದಿರುವುದರಿಂದ ದುರಾಸೆಗೆ ಬಿದ್ದಾಗ ಈ ರೀತಿ ನಡೆಯುತ್ತಿದೆ. ಸಮಾಜದಲ್ಲಿನ‌ ಭ್ರಷ್ಟಾಚಾರ ನಿಲ್ಲಿಸಲು ಹೊರಟಿರುವ ಸುದ್ದಿಯ ಡಾ.ಯು.ಪಿ.ಶಿವಾನಂದರು ಪ್ರಯತ್ನ ನಡೆಸುತ್ತಿರುವುದು ಒಳ್ಳೆಯ ವಿಚಾರ. ಆದರೆ ಇದರ ಸಂಪೂರ್ಣ ನಿರ್ಮೂಲನೆ ಸಾಧ್ಯವೆಂದು ನನಗನಿಸುವುದಿಲ್ಲ.‌ ಆದರೆ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.