ಪತ್ರಕರ್ತ ಬಾಲಕೃಷ್ಣ ಭೀಮಗುಳಿಯವರಿಗೆ ಎಸ್. ಎಲ್. ವಾಸುದೇವ ರಾವ್ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

ಕಲಬುರ್ಗಿಯ ಶ್ರಿ ಬಸವರಾಜ ಅಪ್ಪ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ೩೬ನೇ ರಾಜ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.೪ ರಂದು ನಡೆದಿದ್ದು ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ವಿವಿಧ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ಪ್ರದಾನಿ ಎಚ್ ಡಿ. ದೇವೆಗೌಡ, ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗ್ಡೆ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮೊದಲಾದ ಗಣ್ಯರು ನೆರವೇರಿಸಿದರು. ಪ್ರಸಕ್ತ ಸಾಲಿನ ಎಸ್ ಎಲ್ ವಾಸುದೇವ ರಾವ್ ಪ್ರಶಸ್ತಿಯು ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಉದಯವಾಣಿ ಪತ್ರಕರ್ತರಾಗಿದ್ದು, ಈಗ ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಭೀಮಗುಳಿ ಅವರಿಗೆ ಕೊಡಮಾಡಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತೆ ರಾಧಾ ಹಿರೇಗೌಡ, ಸುವರ್ಣ ನ್ಯೂಸ್ ನ ಎಂ.ಸಿ ಶೋಭಾ, ವಿನಾಯಕ ಭಟ್ ಮುರೂರು ಸೇರಿದಂತೆ ಇನ್ನು ಹಲವರಿಗೆ ಪ್ರಶಸ್ತಿ ನೀಡಲಾಗಿದ್ದು ಕಾರ್ಯಕ್ರಮವನ್ನು
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಕೇಂದ್ರ ಸಚಿವ ಭಗವಂತ ಕೂಬ, ಸಚಿವ ಮುರುಗೇಶ್ ನಿರಾಣಿ ಸಂಸದ ಉಮೇಶ್ ಜಾಣದವ್, ಶಾಸಕ ಅಜೇಯ್ ಧರಂ ಸಿಂಗ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.