Breaking News

ಐವರ್ನಾಡಿನಲ್ಲಿ ರಕ್ತದಾನ ಶಿಬಿರ

Advt_Headding_Middle

 

ರೋಟರಿ ಕ್ಲಬ್‌ ಬೆಳ್ಳಾರೆ ಟೌನ್‌, ಐವರ್ನಾಡು ಗ್ರಾಮ ಪಂಚಾಯತ್‌, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಜನಸ್ಪಂದನ ಸೇವಾ ಟ್ರಸ್ಟ್ ಐವರ್ನಾಡು, ರೆಡ್‌ ಕ್ರಾಸ್‌ ಸೊಸೈಟಿ ಪುತ್ತೂರು, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸಮೃದ್ಧಿ ಫ್ರೆಂಡ್ಸ್‌ ದೇವರಕಾನ, ಚಾಲಕ-ಮಾಲಕರ ಸಂಘ ಐವರ್ನಾಡು ಜಂಟಿ ಆಶ್ರಯದಲ್ಲಿ ರೋಟರಿ-ಕ್ಯಾಂಪ್ಕೋ ಬ್ಲಡ್‌ ಬ್ಯಾಂಕ್‌ ಪುತ್ತೂರು ಸಹಕಾರದಲ್ಲಿ ಸಹಕಾರಿ ಸಂಘದ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ರೋಟರಿ ಕ್ಲಬ್‌ ಬೆಳ್ಳಾರೆ ಟೌನ್‌ ಅಧ್ಯಕ್ಷರಾದ ರೊ| ಪದ್ಮನಾಭ ಬೀಡು ಅಧ್ಯಕ್ಷತೆ ವಹಿಸಿದ್ದರು. ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.‌ ಎನ್.‌ ಮನ್ಮಥ ಶುಭಹಾರೈಸಿದರು. ಡಾ| ರಾಮಚಂದ್ರ ಭಟ್‌ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಶ್ರೀಮತಿ ಸುಜಾತ ಪವಿತ್ರಮಜಲು, ಪ್ಯಾಟ್ರಿಕ್‌ ಸಿಪ್ರಿಯಾನ್‌ ಮಸ್ಕರೇನ್ಹಸ್‌, ಪಿ.ಡಿ.ಒ. ಶ್ಯಾಂಪ್ರಸಾದ್, ಅಚ್ಯುತ ಮುಚ್ಚಿನಡ್ಕ, ಕುಮಾರ ಕಟ್ಟತ್ತಾರು, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್‌ ಸಿ.ಕೆ.ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ವಿನಯಕುಮಾರ್‌ ಸ್ವಾಗತಿಸಿ, ವಂದನಾರ್ಪಣೆ ಗೈದರು. ಈ ಸಂದರ್ಭದಲ್ಲಿ 42 ಯುನಿಟ್‌ ರಕ್ತ ಸಂಗ್ರಹಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.