Breaking News

ಸುಳ್ಯ‌ ಜಾತ್ರೆಗೆ ತಿರುಗುವುದೆ ತೊಟ್ಟಿಲು….?

Advt_Headding_Middle

 

ಕೊರೊನಾ ಕರಿನೆರಳು ಹೊಡೆತ – ಕಂಗೆಟ್ಟ ಅಲೆಮಾರಿಗಳು

ಒಂದೂರಿನಿಂದ ಮತ್ತೊಂದೂರಿಗೆ ಜಾತ್ರೆ, ಹಬ್ಬ ಇನ್ನಿತರ ಕಾರ್ಯಕ್ರಮಕ್ಕೆ ಅಲೆದು ತೊಟ್ಟಿಲು ಆಟಿಕೆಗಳನ್ನು ಕಟ್ಟಿ ಜೀವನ ದೂಡುತ್ತಿದ್ದ ಜನರ ಜೀವನ ಸುಳ್ಯ ಜಾತ್ರೆಯಲ್ಲಿ ತಿರುಗುವುದೇ ಎಂದು ಇನ್ನಷ್ಟೇ ನೋಡಬೇಕು.

ಎರಡು ವರ್ಷಗಳಿಂದ ದೇಶದ ಆರ್ಥಿಕತೆಯನ್ನೇ ಬುಡ ಮೇಲು ಮಾಡಿರುವ ಹೆಮ್ಮಾರಿ ಕೊರೊನಾ ಮತ್ತೆ ಒಕ್ಕರಿಸಿದೆ. ಇದೀಗ ಮತ್ತೆ ರಾಜ್ಯದಲ್ಲಿ ನೈಟ್ ಕಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸುತ್ತಿದ್ದು ಇದು ಸುಳ್ಯ ಜಾತ್ರೆಗೂ‌ ದೊಡ್ಡ ಹೊಡೆತ ನೀಡಿದೆ.

ಸುಳ್ಯದಲ್ಲಿ‌ ಜನವರಿ 10 ರಂದು‌ ಸುಳ್ಯದ ಪುರದೊಡೆಯ ಚೆನ್ನಕೇಶವ ನಿಗೆ ಜಾತ್ರೆಯ ಸಂಭ್ರಮ.‌ ಸುಳ್ಯಕ್ಕೆ ಸುಳ್ಯ‌ ಮಾತ್ರವಲ್ಲದೇ ಸುತ್ತಮುತ್ತಲ‌ ಹಾಗೂ ಪರವೂರಿನ‌ ಸಾವಿರಾರು ಮಂದಿ ಸುಳ್ಯಕ್ಕೆ ಬಂದು ಚೆನ್ನಕೇಶವನ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಸುಳ್ಯ‌ ಜಾತ್ರೆಗೆ ಮೆರುಗು ನೀಡುವುದೆಂದರೆ ಅದು ತೊಟ್ಟಿಲುಗಳು.
ಜಾಯಿಂಟ್ ವೀಲ್, ಬ್ರೇಕ್ ಡ್ಯಾನ್ಸ್, ಕೊಲಾಂಬಾಸ್, ಡ್ರಾಗನ್ ಟ್ರೆ, ಮಕ್ಕಳ ಆಟಿಕೆಗಳು ಇದು‌ ಬಹುದೊಡ್ಡ ಆಕರ್ಷಣೆಗಳು.‌ ಇದರಲ್ಲಿ ಕುಳಿತು ಸಂಭ್ರಮಿಸಲೆಂದೇ ಸಾವಿರಾರು‌ ಮಂದಿ ಬರಿತ್ತಾರೆ. ಆದರೆ ಈ‌ ಬಾರಿ ಕೊರೊನಾ ಕರಿನೆರಲು ಇದರ ಮೇಲೆ ಬಿದ್ದಿದೆ. ವಾರದ ಹಿಂದೆ ಸುಳ್ಯಕ್ಕೆ ಈ ಆಟಿಕೆಗಳು ಬಂದಿದ್ದು ಅದು ಸುಳ್ಯ ತಲುಪಿ ಜೋಡಣೆ ಕಾರ್ಯ ನಡೆಯುತ್ತಿದ್ದಂತೆ ಸರಕಾರದ ಕರ್ಫ್ಯೂ ನಿಯಮ ಹೊರ ಬಿತ್ತು.‌ ಇದರಿಂದಾಗಿ ಇದನ್ನೇ ನಂಬಿಕೊಂಡು ಜೀವನ ನಡೆಸುವ ಕೆಲಸಗಾರರು ತಲೆ ಮೇಲೆ ಕೈ ಹೊತ್ತುಕೊಳ್ಳುವಂತಾಗಿದೆ.

ಸುಳ್ಯಕ್ಕೆ ಸುಮಾರು 12 ರಿಂದ 14 ಲೋಡ್ ಆಟಿಕೆಗಳು ಬಂದಿದ್ದು ಸಾಗಾಟ ಖರ್ಚು‌ 3 ಲಕ್ಷಕ್ಕೂ ಹೆಚ್ಚು ತಗುಲಿದೆ. ಮೂರ್ನಾಲ್ಕು ದಿನಗಳ ಹಿಂದೆ ನಾವು ಇದನ್ನೆಲ್ಲ ಸುಳ್ಯಕ್ಕೆ ತಂದಿದ್ದೇವೆ. ಬಳಿಕ ಕರ್ಫ್ಯ ಸರಕಾರ ಘೋಷಣೆ ಮಾಡಿದೆ.‌ಇದರಿಂದ ನಮಗೆ ತುಂಬಾ ನಷ್ಟ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನಮ್ಮ ಜತೆಗೆ ಇದನ್ನೆ ನಂಬಿಕೊಂಡಿರುವ 60-70 ನೌಕರರು ಇದ್ದಾರೆ. ಕರ್ಫ್ಯೂ ಘೋಷಣೆ ಏಕಾಏಕಿ ಮಾಡದೆ 10 ದಿನ ಗಡುವು ನೀಡಿ ಮಾಡಿದರೆ ಏನಾದರೂ ಮಾಡಬಹುದಿತ್ತು ಎನ್ನುತ್ತಾರೆ ಅಮ್ಯೂಸ್ ಮೆಂಟ್ ನ ಪಾಲುದಾರ ಬಾಲಕೃಷ್ಣ ಶೆಟ್ಟಿ ಕಾರ್ಕಳ.

ಈ ಬಾರಿ ನಾವು ಅವರನ್ನು ಸುಳ್ಯಕ್ಕೆ ಕರೆದಿಲ್ಲ. ಅವರೇ ಬಂದಿದ್ದಾರೆ.‌ ಆಟಿಕೆಗಳ ಜೋಡಣೆ ಮಾಡುವ ಮೊದಲು ನಾವು ಅಡ್ವಾನ್ಸ್ ತೆಗೆದುಕೊಂಡಿದ್ದೆವು. ಆದರೆ ಸರಕಾರ ಕೊರೊನಾ ನಿಯಮದಿಂದಾಗಿ ಈಗ ಇದೆಲ್ಲ ಆಗುತ್ತಿಲ್ಲ. ನಾವು ಅವರಿಂದ ಪಡೆದ ಅಡ್ವಾನ್ಸ್ ಹಿಂತಿರುಗಿಸಿದ್ದೇವೆ.‌ ಅವರಿಗೆ ನಾವು ಅನುಮತಿ ನೀಡುತ್ತಿಲ್ಲ ಎನ್ನುತ್ತಾರೆ ದೇವಸ್ಥಾನದ ಆಡಳಿತ‌ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ.

“ಇದು ನಮಗೆ ಸೀಸನ್ ಸಮಯ. ಕಳೆದ ಬಾರಿಯೂ ನಮಗೆ ಲಾಸ್. ಈ ಬಾರಿ ಇಲ್ಲಿಗೆ ಬಂದ ಮೇಲೆ ಹೀಗಾಗಿದೆ. ಏನು ಮಾಡೋದು. ಒಬ್ಬೊಬ್ಬರಿಗೆ ಕನಿಷ್ಟ 2. ರಿಂದ 3 ಲಕ್ಷ ನಷ್ಟವಾಗಬಹುದು.‌ ನಮಗೆ ಸೋಮವಾರದಿಂದಾದರೂ ಅವಕಾಶ ನೀಡಿದರೆ ಇಲ್ಲಿಗೆ ಬಂದಿರುವ ಖರ್ಚಾದರೂ ಸರಿದೋಗಿಸಬಹುದಾಗಿತ್ತು ಎನ್ನುತ್ತಾರೆ ಕೆಲಸಗಾರ ಶಿರಸಿಯ ವಿಜಯ್.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.