Breaking News

ಕುಕ್ಕುಜಡ್ಕದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Advt_Headding_Middle

ಅಟೋ ಚಾಲಕ ಮಾಲಕರ ಸಂಘಕ್ಕೆ ಗರುಡ ರತ್ನ ಪ್ರಶಸ್ತಿ ಪ್ರದಾನ

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಗರುಡ ಯುವಕ ಮಂಡಲ ಹಾಗೂ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ ಕುಕ್ಕುಜಡ್ಕದ ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜ.2 ರಂದು ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ|ನಂದಕುಮಾರ್ ರವರು ನೆರವೇರಿಸಿದರು. ಗರುಡ ಯು.ಮಂ.ಅಧ್ಯಕ್ಷ ಮನೋಜ್ ಪಡ್ಪು ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಯಾನಂದ ಕೇರ್ಪಳ, ಅಮರಮುಡ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಪದ್ಮಪ್ರಿಯಾ ಮೇಲ್ತೋಟ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಚಂದ್ರ ಆನೆಕಾರ್, ಮುಖ್ಯ ಶಿಕ್ಷಕಿ ಸವಿತಾ ಕೆ.ಕೆ ಉಪಸ್ಥಿತರಿದ್ದರು.
ಅನಿಲ್ ಪೂಜಾರಿಮನೆ ಸ್ವಾಗತಿಸಿ,ಅರುಣ್ ಕುಮಾರ್ ಮುಂಡಾಜೆ ವಂದಿಸಿದರು. ಗಣೇಶ್ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಮಿತ್ರ ಮುರಳಿ ನಳಿಯಾರು ಸಹಕರಿಸಿದರು.
ಈ ಸಂದರ್ಭದಲ್ಲಿ ಗರುಡ ಯುವಕ ಮಂಡಲದ ವತಿಯಿಂದ ಕುಕ್ಕುಜಡ್ಕ ಶ್ರೀ ಮಹಾವಿಷ್ಣು ಆಟೋಚಾಲಕ ಮಾಲಕರ ಸಂಘಕ್ಕೆ ಗರುಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಹೃದಯ ರೋಗ ತಪಾಸಣೆ, ಕಣ್ಣಿನ ತಪಾಸಣೆ, ಮಕ್ಕಳ ಚಿಕಿತ್ಸಾ ವಿಭಾಗ, ಮಧುಮೇಹ,ರಕ್ತದ ಒತ್ತಡ ತಪಾಸಣೆ,ಸಾಮಾನ್ಯ ರೋಗ ತಪಾಸಣೆ ಯನ್ನು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಜೊತೆಗೆ ,ತಜ್ಞ ವೈದ್ಯರೊಂದಿಗೆ ಉಚಿತವಾಗಿ ನಡೆಸಲಾಯಿತು.
ಸುಮಾರು ೧೮೦ ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.