ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ನವೀನಾ ದೇವರಾಜ್ ರಿಗೆ ಸನ್ಮಾನ

Advt_Headding_Middle
Advt_Headding_Middle

 

 



 

 

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಮತ್ತು ನಿರ್ದೇಶಕರಾಗಿದ್ದ ಕೆ.ಎಸ್. ದೇವರಾಜ್ ರವರು ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ನಿರ್ದೇಶಕರ ಒಂದು ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗಿ ದಿ. ಕೆ.ಎಸ್. ದೇವರಾಜ್ ರ ಪತ್ನಿ ಶ್ರೀಮತಿ ನವೀನ ದೇವರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಜ. 7ರಂದು ಸಂಘದ ವತಿಯಿಂದ ಶ್ರೀಮತಿ ನವೀನ ದೇವರಾಜ್ ರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಶ್ರೀಮತಿ ಯಮುನ ಎಸ್.ಎಲ್, ಶ್ರೀಮತಿ ವೇದಾವತಿ ಕೋಟಿಗೌಡನಮನೆ ಮತ್ತು ಶ್ರೀಮತಿ ಅನಿತಾ ರೇಗಪ್ಪ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಉಪಾಧ್ಯಕ್ಷ ಭರತ್ ನೆಕ್ರಾಜೆ, ಸುಬ್ರಹ್ಮಣ್ಯ ಕ್ಷೇತ್ರದ ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಮತ್ತು ನಿರ್ದೇಶಕ ವೆಂಕಟ್ರಮಣ ಕೇಂಬ್ರೋಳಿ ಅಭಿನಂದನಾ ಮಾತುಗಳನ್ನಾಡಿದರು. ಚುನಾವಣಾಧಿಕಾರಿ ನಾಗೇಂದ್ರ, ಶ್ರೀಮತಿ ಲೀಲಾವತಿ ಉಪ್ಪಳಿಕೆ, ಮಾಗಣೆ ಗೌಡರಾದ ಉದಯಕುಮಾರ್ ಬಾನಡ್ಕ, ದಿ. ಕೆ.ಎಸ್. ದೇವರಾಜ್ ರ ಪುತ್ರ ದವನ್ ಕಳಿಗೆ, ಕುಶಾಲಪ್ಪ ಅಮೈ, ದಯಾನಂದ ಹೊಸಂಗಡಿ, ಲೋಕೇಶ್ ಬಿ.ಎನ್, ತಮ್ಮಪ್ಪ ಗೌಡ ತುಂಬತ್ತಾಜೆ, ದೊಡ್ಡಣ್ಣ ಗೌಡ ಪರಮಲೆ, ನಿರ್ದೇಶಕರಾದ ಅಣ್ಣೋಜಿ ಗೌಡ ಕಟ್ಟ, ಕೇಶವ ಆಚಾರ್ಯ, ಶ್ರೀನಿವಾಸ ಆಚಾರ್ಯ, ಗಿರೀಶ ಎಂ, ರಮೇಶ್ ಸಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ಸ್ವಾಗತಿಸಿ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.