ಕೊರೊನಾ ಅನಾವಶ್ಯಕ ಭಯ ಹುಟ್ಟಿಸಬೇಡಿ : ಜಾಗೃತಿ ಮೂಡಿಸಿ

Advt_Headding_Middle
Advt_Headding_Middle

 

ಸುಳ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಡಳಿತಾಧಿಕಾರಿ ಸೂಚನೆ

ಕೊರೊನಾ ವಿಚಾರದಲ್ಲಿ ಜನರಲ್ಲಿ ಅನಾವಶ್ಯಕ ಭಯ ಹುಟ್ಟಿಸಬೇಡಿ. ಬದಲಾಗಿ ಕೊರೊಣಾದ ಕುರಿತು ಜಾಗೃತಿ ಮೂಡಿಸುವ ಕೆಲಸ ನಾವೆಲ್ಲರೂ ಮಾಡಬೇಕು. ಇದರಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು ತೊಡಗಿಸಿಕೊಳ್ಳಬೇಕು ಎಂದು ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಗಾಯತ್ರಿ ಎನ್ ನಾಯಕ್ ಹೇಳಿದರು.
ಇಂದು ಸುಳ್ಯದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಕೊರೊನಾ ನಿಯಂತ್ರಣಕ್ಕೆ ತಾಲೂಕಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.
ಕೋವಿಡ್ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ರಿಂದ ಅವರು ಮಾಹಿತಿ ಪಡೆದರು. ಸುಳ್ಯ ತಾಲೂಕಿನಲ್ಲಿ ಕಳೆದ ೫ ದಿನಗಳಿಂದ ಕೊರೊನಾ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಒಟ್ಟು ೩ ಸಕ್ರಿಯ ಪ್ರಕರಣಗಳಿದ್ದು ಅವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಕೋವಿಡ್ ಸ್ವಾಬ್ ಟೆಸ್ಟ್ ಗೆ ಗುರಿ ನೀಡಲಾಗಿದೆ. ಈಗ ನಮ್ಮಲ್ಲಿ ದಿನವೊಂದಕ್ಕೆ ೭೦೦ ಮಂದಿಯ ಸ್ವಾಬ್ ತೆಗೆಯಲಾಗುತ್ತಿದೆ. ಆದರೆ ನಗರ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿರುವುದರಿಂದ ಲಾಬ್ ಟೆಕ್ನಿಷಿಯನ್‌ಗಳ ಕೊರತೆ ಇದೆ. ಮತ್ತು ನಗರ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರು ಇಲ್ಲದಿರುವುದು ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿದೆ” ಎಂದು ಹೇಳಿದರು.
‘`ಸ್ವಾಬ್ ಟೆಸ್ಟ್ ಂಗ್ ಆಗಬೇಕು. ಆ ಗುರಿ ತಲುಪಲು ಏನೆಲ್ಲ ಅಗತ್ಯ ಕ್ರಮ ಆಗಬೇಕೋ ಅದನ್ನು ಮಾಡಬೇಕು. ಎಲ್ಲಿ ಜನ ಸಂಖ್ಯೆ ಹೆಚ್ಚಿದೆಯೋ ಅಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಸಂತೆ ಮಾರು ಕಟ್ಟೆ ಇತ್ಯಾದಿಗಳಲ್ಲಿ ಅಗತ್ಯವಾಗಿ ಮಾಡಬೇಕು. ಬಸ್ ನಿಲ್ದಾಣದಲ್ಲಿ ಟೆಸ್ಟ್ ನಡೆಸಬೇಕು. ಯಾಕೆಂದರೆ ಸುಳ್ಯಕ್ಕೆ ಹೊರಗಿನಿಂದ ಬರುವವರ ಸ್ವಾಬ್ ಕಡ್ಡಾಯ ಟೆಸ್ಟ್ ಆಗಬೇಕು. ನಗರ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯ ನಡೆಸಲು ಅಂಗನವಾಡಿ ಕಾರ್ಯಕರ್ತರನ್ನು ಕರೆದುಕೊಳ್ಳಿ. ಕೊರೊಣಾ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದು ಹೇಳಿದರು. ತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.